ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ನಡೆಸಿದ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಜುಲೈ 19ರ ಮಧ್ಯಾಹ್ನ 12 ಗಂಟೆಯ ನಂತರ ಎಸ್‌ಎಂಎಸ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀûಾ ಮಂಡಳಿ ತಿಳಿಸಿದೆ.
ರಾಜ್ಯದ 13,036 ಪ್ರೌಢಶಾಲೆಯ 20,8151 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 84,701 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ.40.69ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಯ 32,556 ವಿದ್ಯಾರ್ಥಿಗಳು (ಶೇ.38.40), ಅನುದಾನಿತ ಶಾಲೆಯ 26,797 ವಿದ್ಯಾರ್ಥಿಗಳು (ಶೇ.42.49) ಹಾಗೂ ಅನುದಾನ ರಹಿತ ಶಾಲೆಯ 22,648(ಶೇ.42.50) ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಫಲಿತಾಂಶವನ್ನು ಎಸ್‌ಎಟಿಎಸ್ ಜಾಲತಾಣ ಹಾಗೂslc.kar.nic.in ಅಥವಾ slc.kar.nic.in ವೆಬ್‌ಸೈಟ್‌ನಲ್ಲೂ ಪಡೆಯಬಹುದು. ಜುಲೈ 20ರ ಮಧ್ಯಾಹ್ನದ ನಂತರ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಜುಲೈ 28ವರೆಗೆ ಛಾಯಾಪ್ರತಿಗೆ ಹಾಗೂ ಜು. 21ರಿಂದ ಆಗಸ್ಟ್ 4ರವರೆಗೆ ಮರುಮೌಲ್ಯ ಮಾಪನಕ್ಕೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ಜೂನ್ 21ರಿಂದ 28ರ ವರೆಗೆ ರಾಜ್ಯದ 673 ಪರೀûಾ ಕೇಂದ್ರದಲ್ಲಿ ಪೂರಕ ಪರೀಕ್ಷೆ ನಡೆದಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಜುಲೈ 8ರಿಂದ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 50 ಕೇಂದ್ರಗಳಲ್ಲಿ 10,946 ಮೌಲ್ಯಮಾಪಕರು ನಡೆಸಿದ್ದರು.