ಧಾರವಾಡ: ಕೇವಲ ಪಾಸಿಂಗ್ ಪ್ಯಾಕೇಜ್‌ನ ಬೆನ್ನು ಹತ್ತದೇ ಸ್ಕೋರಿಂಗ್ ಪ್ಯಾಕೇಜ್ ಮಾಡುವ ಮೂಲಕ ಮಕ್ಕಳ ಪ್ರಗತಿಗೆ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣದ ರಾಜ್ಯ ನಿರ್ದೇಶಕ ಎಂ. ಪ್ರಸನ್ನಕುಮಾರ ಹೇಳಿದರು.
ಧಾರವಾಡ ಗ್ರಾಮೀಣ ಬಿಇಒ ಕಚೇರಿ ಸಭಾಭವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಸಾಧನೆ ಮಾಡಿದ ಶಾಲಾ ಪ್ರಧಾನ ಗುರುಗಳಿಗಾಗಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಲಿಕೆಯ ಫಲಸಂವರ್ಧನೆಗೆ ನಮ್ಮ ಬೋಧಕ ಬಳಗ ಶಕ್ತಿ ಮೀರಿ ಶ್ರಮಿಸಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಸಾಧಿಸಲು ಸಾಧ್ಯವಾಗುವ ಪ್ರಮುಖ ಅಂಶಗಳುಳ್ಳ ಕ್ರಿಯಾಯೋಜನೆ ತಯಾರಿಸಬೇಕು. ರಸಪ್ರಶ್ನೆ ಕಾರ್ಯಕ್ರಮಗಳ ಸಂಘಟನೆ, ಶೈಕ್ಷಣಿಕ ಪ್ರದರ್ಶನ, ಅನಿರೀಕ್ಷಿತ ಪರೀಕ್ಷೆಗಳು, ಮೇಳಗಳು, ಸವಾಲ್-ಜವಾಬ್, ಮ್ಯೂಸಿಕಲ್ ಚೇರ್, ರಸಪ್ರಶ್ನೆ ಕಾರ್ಯಕ್ರಮ, ವಿಷಯವಾರು ಫೋರಂಗಳು, ಗುಂಪು ಅಭ್ಯಾಸ, ಪ್ರಾಜಕ್ಟ್ಗಳ ನಿರ್ವಹಣೆ ಸೇರಿದಂತೆ ಹಲವಾರು ಕಲಿಕೆಯ ಫಲ ಸಂವರ್ಧನೆಯ ವಿಚಾರಗಳನ್ನು ಅವರು ಪ್ರತಿಪಾದಿಸಿದರು.
ಡಿಡಿಪಿಐ ಮೋಹನಕುಮಾರ್ ಹಂಚಾಟೆ, ಜಿಲ್ಲೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ, ಗ್ರಾಮೀಣ ತಾಲೂಕು ಬಿಇಒ ಉಮೇಶ ಬಮ್ಮಕ್ಕನವರ್, ಡಯಟ್ ಹಿರಿಯ ಉಪನ್ಯಾಸಕ ಎಂ.ಜಿ. ಮರಿಗೌಡರ, ಶಹರ ಬಿ.ಇ.ಒ. ಅಕºರ್‌ಅಲಿ ಖಾಜಿ, ಗ್ರಾಮೀಣ ಬಿ.ಆರ್.ಸಿ ಸಮನ್ವಯಾಧಿಕಾರಿ ನಹೀದಾ ದಫೇದಾರ ಸೇರಿದಂತೆ ತಾಲೂಕಿನ ಸಿಆರ್‌ಪಿ, ಬಿ.ಅರ್.ಪಿ., ಬಿ.ಐ.ಅರ್.ಟಿ., ಪ್ರೌಢ ಶಾಲಾ ಮುಖ್ಯಾಧ್ಯಾಪಕರು, ವಿಷಯ ಶಿಕ್ಷಕರು ಹಾಜರಿದ್ದು, ನಿರ್ದೇಶಕರಿಗೆ ಮಾಹಿತಿ ಒದಗಿಸಿದರು.
ಇದನ್ನೂ ಓದಿ :ಅಡುಗೆ ಅನಿಲ ಪೈಪ್‌ಲೈನ್‌ನಲ್ಲಿ ಸೋರಿಕೆ : ಜನರ ಆತಂಕ
ಸಂವಾದ: ಗ್ರಾಮೀಣ ತಾಲೂಕಿನ ಲಕಮಾಪುರ ಪ್ರಾಥಮಿಕ ಶಾಲೆ ಹಾಗೂ ಯಾದವಾಡದ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ನಿರ್ದೇಶಕರು ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಪ್ರಶಂಸಿಸಿದರು. ಇಂಗ್ಲೀಷಿನಲ್ಲಿಯೂ ಇದೇ ರೀತಿ ಮಾತನಾಡಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಬಿ.ಇ.ಒ. ಉಮೇಶ ಬೊಮ್ಮಕ್ಕನವರ ತಮ್ಮ ತಾಲೂಕಿನಲ್ಲಿ ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿವಿನಫಲ ಸಂವರ್ಧನೆಗೆ ಕೈಕೊಂಡ ವಿಭಿನ್ನ ಕಾರ್ಯ ಚಟುವಚಟಿಕೆಗಳನ್ನು ವಿವರಿಸಿದರು.