Advertisement
ಕಾಲೇಜಿನ ಉಪ ಪ್ರಾಂಶುಪಾಲ ಬಿ.ಎಂ ರಾಧಮ್ಮ ಇವರನ್ನು ಕೂಡಲೇ ಸೇವೆಯಿಂದ ವಜಗೊಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ರೈತಸಂಘದ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಒತ್ತಾಯಿಸಿದ್ದಾರೆ.
Related Articles
Advertisement
ಸರ್ಕಾರ ಸರ್ಕಾರಿ ಶಾಲೆಗಳಿಗೆ ಸಾವಿರಾರು ರೂ.ಗಳನ್ನು ಕಟ್ಟಡಗಳಿಗೆ, ಶಿಕ್ಷಕರಿಗೆ ಸಂಬಳ, ಬಡ ಮಕ್ಕಳಿಗೆ ಬಟ್ಟೆ, ಪಠ್ಯಪುಸ್ತಕ, ಶೂ, ಬಿಸಿಯೂಟ ಸೇರಿದಂತೆ ವಿವಿಧ ವಿಷಯಗಳಿಗೆ ಖರ್ಚುಮಾಡುತ್ತಿದೆ. ಖಾಸಗಿ ಶಾಲೆಗಳ ಸರಿ ಸಮಾನವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕರುಗಳೇ ಹಣ ಉಳಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಮಣ್ಣುಹೊರುವ, ಗೋಡೆ ಒಡೆಯುವ ಕೆಲಸವನ್ನು ಮಾಡಿಸಿಕೊಂಡು ಓದುವ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ದೈಹಿಕ ಶ್ರಮವನ್ನು ನೀಡಿ ಮನೆಯಲ್ಲೂ ಓದದಂತೆ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ಯಾಕೆ ಈ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಕಟ್ಟಡ ರಿಪೇರಿಗೆ ಸರ್ಕಾರ ಅನುದಾನ ನೀಡುತ್ತಿಲ್ಲವೇ? ಈ ಕೆಲಸಗಳಿಂದ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದಿಲ್ಲವೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಪ ಪ್ರಾಂಶುಪಾಲರಾದ ಬಿ.ಎಂ. ರಾಧಮ್ಮರನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಕೋಲಾರ ಜಿಲ್ಲಾ ಆಡಳಿತದ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಂದ ಕೆಲಸ:
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಪೂರ್ವಾಭ್ಯಾಸಕ್ಕೆ ಅನುಮು ಮಾಡಿಕೊಡಬೇಕು. ಈ ವೇಳೆಯಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಅಭ್ಯಾಸ ಮಾಡಿಕೊಳ್ಳದೆ ಪರೀಕ್ಷೆ ಎದುರಿಸಲು ಸಾಧ್ಯವೇ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಉತ್ತರ ಕೊಡಲೇಬೇಕು. ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಅವರನ್ನು ಸೇವೆಯಿಂದ ವಜಾ ಗೊಳಿಸಲೇಬೇಕು. ಉಪ ನಿರ್ದೇಶಕರ ಕಛೇರಿ ಪಕ್ಕದ ಶಾಲೆಯಲ್ಲಿ ಈ ರೀತಿ ಆದರೆ ಗಡಿ ಭಾಗದ ಶಾಲೆಗಳ ಗತಿ ಏನು ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಇದರ ವಿರುದ್ಧ ಸರಿಯಾದ ರೀತಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದುರೈತಸಂಘದ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಒತ್ತಾಯಿಸಿದರು.