Advertisement

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ದೋಷ

11:10 PM Sep 08, 2019 | Team Udayavani |

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಪ್ರೌಢ ಶಾಲೆಗಳಿಗೆ ಕಳುಹಿಸಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಮುದ್ರಣ ದೋಷ, ವಿದ್ಯಾರ್ಥಿಗಳ ಫೋಟೋ ತಲೆಕೆಳಗಾಗಿರುವುದು ಸೇರಿ ಹಲವು ತಪ್ಪುಗಳು ಕಂಡು ಬಂದಿದೆ.

Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಒಂದೇ ವಾರದಲ್ಲಿ ಫ‌ಲಿತಾಂಶ ನೀಡಿದ ಪರೀಕ್ಷಾ ಮಂಡಳಿಗೆ ಅಂಕಪಟ್ಟಿಯನ್ನು ಸರಿಯಾದ ಸಮಯಕ್ಕೆ ಪೂರೈಸಿಲ್ಲ. ಜತೆಗೆ ಅಂಕಪಟ್ಟಿಯಲ್ಲಿ ಸಾಕಷ್ಟು ದೋಷವಿದೆ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಅಂಕಪಟ್ಟಿಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ದಂಡ ಕಟ್ಟು ವಂತೆ ಪ್ರೌಢ ಶಿಕ್ಷಣ ಮಂಡಳಿಯು ಶಾಲೆಗಳಿಗೆ ತಿಳಿಸಿದೆ. ಇದಕ್ಕೆ, ಶಾಲೆಗಳು ಮಕ್ಕಳಿಂದಲೇ ಹಣ ವಸೂಲಿ ಮಾಡಬೇಕಾಗಿದೆ.  ಮಂಡಳಿಯ ಮುಖ್ಯಸ್ಥರು ಲೋಪ ದೋಷ ಗಮನಿಸದೆ ಮಕ್ಕಳಿಗೆ ಅಂಕಪಟ್ಟಿ ನೀಡಿದ್ದಾರೆ.

ಮಂಡಳಿಯ ಅಧಿಕಾರಿಗಳು ಮಾಡಿರುವ ತಪ್ಪಿಗೆ ಶಾಲೆಗಳು ದಂಡ ಕಟ್ಟಬೇಕೆಂದರೆ, ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಇಲ್ಲವೇ? ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಪ್ರಶ್ನಿಸಿದ್ದಾರೆ. ದಂಡವಿಲ್ಲದೇ ಲೋಪ ಸರಿಪಡಿಸಿಕೊಡಲು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next