Advertisement
ಪರೀಕ್ಷೆ ಬರೆದ 8 ಲಕ್ಷದ 53 ಸಾವಿರದ 436 ವಿದ್ಯಾರ್ಥಿಗಳ ಪೈಕಿ, ಈ ಬಾರಿ 7 ಲಕ್ಷದ 30 ಸಾವಿರದ 881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ. 329 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, 472 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ.
Related Articles
Advertisement
ಫಲಿತಾಂಶವು //kseeb.kar.nic.in , //sslc.karnataka.gov.in, //karresults.nic.in ವೆಬ್‌ಸೈಟ್ ಗಳಲ್ಲಿ ಮಧ್ಯಾಹ್ನ 1 ಗಂಟೆಯಿಂದ ವೇಳೆಗೆ ಲಭ್ಯವಿದೆ.
ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ 27 ಮೇಯಿಂದ ಜೂನ್ 4 ರ ವರೆಗೆ ನಡೆಯಲಿದೆ. ಮೇ 20 ರಿಂದ ಆನ್ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ.
ಒತ್ತಡದಲ್ಲಿರುವ ವಿದ್ಯಾ ರ್ಥಿಗಳಿಗೆ ಸಹಾಯವಾಣಿ
ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಹಿನ್ನೆಲೆ ಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ ಮಾನಸಿಕ ಆರೋಗ್ಯ ಸಹಾ ಯವಾಣಿ ತೆರೆದಿದೆ. ಒತ್ತಡ ದಲ್ಲಿರುವ ವಿದ್ಯಾ ರ್ಥಿಗಳಿಗೆ ಈ ಮೂಲಕ ಟೆಲಿ ಕೌನ್ಸೆಲಿಂಗ್ ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು 080-46110007 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.