Advertisement

ಎಸೆಸೆಲ್ಸಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆ ರದ್ದು 

12:58 AM Dec 10, 2021 | Team Udayavani |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಜಾರಿ ಗೊಳಿಸಿದ್ದ ಬಹುಆಯ್ಕೆ ಪ್ರಶ್ನೆಪತ್ರಿಕೆ (ಎಂಸಿಕ್ಯು) ಯನ್ನು ಈ ಬಾರಿ ರದ್ದುಗೊಳಿಸಿದ್ದು, ಮತ್ತೆ ವಿಸ್ತೃತವಾಗಿ ಉತ್ತರಗಳನ್ನು ಬರೆಯುವ ಪ್ರಶ್ನೆಪತ್ರಿಕೆಯನ್ನೇ ಜಾರಿಗೊಳಿಸಲು ನಿರ್ಧರಿಸಲಾಗಿದೆ.

Advertisement

2022ರ ಮಾರ್ಚ್‌-ಎಪ್ರಿಲ್‌ನಲ್ಲಿ ನಡೆಯಲಿ ರುವ ಪ್ರಸಕ್ತ ಸಾಲಿನ ಪರೀಕ್ಷಾ ವಿಧಾನಗಳು ಮತ್ತು ನಿಯಮ ಕುರಿತು ಮಾರ್ಗಸೂಚಿ ಹೊರಡಿಸ ಲಾಗಿದ್ದು, ಬಹು ಆಯ್ಕೆ ಪ್ರಶ್ನೆಪತ್ರಿಕೆ ಮಾದರಿ ಹಿಂಪಡೆಯಲಾಗಿದೆ.

ನೂತನ ನಿಯಮದಂತೆ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ ಮತ್ತು ಉಳಿದ ವಿಷಯಗಳಲ್ಲಿ 100 ಅಂಕಗಳಿಗೆ ಪರೀಕ್ಷೆ ಇರಲಿದೆ. ಇದರಲ್ಲಿ 80 ಅಂಕಗಳು ಥಿಯರಿ ಪರೀಕ್ಷೆ ಮತ್ತು 20 ಅಂಕ ಗಳಿಗೆ ಆಂತರಿಕ ಮೌಲ್ಯಮಾಪನ ವಿಧಾನ ಅಳವಡಿಸಲಾಗುತ್ತದೆ. ಪ್ರಥಮ ಭಾಷೆಗೆ 100 ಥಿಯರಿ ಮತ್ತು 25 ಅಂಕಗಳು ಆಂತರಿಕ ಮೌಲ್ಯ ಮಾಪನಕ್ಕೆ ಒಳಪಡಲಿವೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.

ಹಾಜರಾತಿ ವಿನಾಯಿತಿ ರದ್ದು:

ಕಳೆದ ವರ್ಷ ಪರೀಕ್ಷೆಗೆ ಹಾಜ ರಾಗುವ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ಕೂಡ ವಿನಾಯಿತಿ ನೀಡ ಲಾಗಿತ್ತು. ಆದರೆ ಈ ಬಾರಿ ಪರೀಕ್ಷೆಗೆ ಹಾಜರಾಗಲು ಆನ್‌ಲೈನ್‌ / ಭೌತಿಕ ತರಗತಿಗಳಲ್ಲಿ ಶೇ. 75ರಷ್ಟು ಹಾಜ ರಾತಿ ಇರಬೇಕು. ಇಲ್ಲದಿದ್ದರೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ.

Advertisement

ಕೊರೊನಾ ಸೋಂಕು ಪ್ರಕರಣಗಳು ಇರುವುದರಿಂದ ಈ ಬಾರಿಯೂ ಬಹು ಆಯ್ಕೆ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಓದಿನ ಕಡೆ ನಿರ್ಲಕ್ಷ್ಯ ಮಾಡುವುದು ಬೇಡ. ವಿಸ್ತೃತ ಉತ್ತರ ಬರಬೇಕಿರುವುದರಿಂದ ಹೆಚ್ಚಿನ ಶ್ರಮ ವಹಿಸಿ ಓದಿನ ಕಡೆ ಗಮನ ನೀಡಬೇಕು ಎಂದು  ಹೇಳಿದ್ದಾರೆ.

ತಡವಾದರೂ ಅವಕಾಶ:

ಈ ಬಾರಿಯ ಪರೀಕ್ಷೆಗೆ 15 ನಿಮಿಷ ತಡವಾಗಿ ಬಂದರೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಎಸೆಸೆಲ್ಸಿ ಮಂಡಳಿ ತಿಳಿಸಿದೆ. ಬೆಳಗ್ಗೆ 9.30ಕ್ಕೆ ಪರೀಕ್ಷೆಗಳು ಆರಂಭವಾಗಲಿದ್ದು, 9.45ರ ವರೆಗೆ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೂ ಅವಕಾಶವಿದೆ. 9.15 ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿರಬೇಕು. 9.25ಕ್ಕೆ ಪರೀಕ್ಷಾ ಮೇಲ್ವಿಚಾರಕರು ಕೊಠಡಿ ಮೇಲ್ವಿಚಾರ ಕರಿಗೆ ಪ್ರಶ್ನೆಪತ್ರಿಕೆ ವಿತರಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆ ಮಾಡಲಾಗುತ್ತದೆ.

ಕಳೆದ ವರ್ಷ ತಜ್ಞರ ಅಭಿಪ್ರಾಯ ಪಡೆದು ತಾತ್ಕಾಲಿಕವಾಗಿ ನಿಯಮ ಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಈ ವರ್ಷ ತರಗತಿಗಳು ನಡೆಯು ತ್ತಿರುವುದರಿಂದ ಹಿಂದಿನಂತೆ ವಿಸ್ತೃತ ಉತ್ತರ ಬರೆಯುವ ಪ್ರಶ್ನೆಪತ್ರಿಕೆ ಗಳನ್ನೇ ನೀಡಲಾಗುತ್ತದೆ.– ವಿ. ಸುಮಂಗಲಾ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next