Advertisement

ಎಸೆಸೆಲ್ಸಿ: ಶುಲ್ಕ ಪಾವತಿಗೆ ಸೂಚನೆ

11:18 PM Dec 22, 2022 | Team Udayavani |

ಬೆಂಗಳೂರು: ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಪಾವತಿಸಲು ಕ್ರಮ ವಹಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.

Advertisement

2023ರ ಮಾರ್ಚ್‌/ ಎಪ್ರಿಲ್‌ ನಲ್ಲಿ ನಡೆಯಲಿರುವ  ಮುಖ್ಯ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ನೋಂದಣಿ ಮಾಹಿತಿಗಳನ್ನು ಮುಖ್ಯ ಶಿಕ್ಷಕರ ವತಿಯಿಂದ ಮಂಡಲಿಯ ಜಾಲತಾಣದ  (https://sslc.karnataka.gov.in)  ಶಾಲಾ ಲಾಗಿನ್‌ನಲ್ಲಿ ಈಗಾಗಲೇ ಪಡೆಯಲಾಗಿದೆ.

ಶುಲ್ಕ ಪಾವತಿಸಲು  ದಿನಾಂಕ ನಿಗದಿ:

ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್‌ ಮುದ್ರಿಸಿಕೊಳ್ಳಲು ಡಿ.21 ರಿಂದ 27ರ ವರೆಗೆ ದಿನಾಂಕ ನಿಗದಿಪಡಿಸಲಾಗಿದೆ. ಡಿ.21ರಿಂದ 29ರ ವರೆಗೆ ಚಲನ್‌ ಮುದ್ರಿಸಿಕೊಂಡು ಬ್ಯಾಂಕಿಗೆ ಪ್ರವೇಶ ಶುಲ್ಕ ಜಮೆ ಮಾಡಲು ಅವಕಾಶಗಳಿವೆ. 2022 ಹಾಗೂ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಹಳೆ ಪದ್ದತಿಯಂತೆ ಮಂಡಳಿಯ ನೆಫ್ಟ್ ಚಲನ್‌ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಾವತಿಸಲು ಡಿ.29 ಕೊನೆಯ ದಿನಾಂಕವಾಗಿದೆ. ಇಂತಹ ಅಭ್ಯರ್ಥಿಗಳು ಜ.6ರೊಳಗೆ  ದಾಖಲೆಗಳನ್ನು ಮಂಡಳಿಗೆ ಸಲ್ಲಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next