Advertisement

SSLC ಪರೀಕ್ಷೆ ಮುಕ್ತಾಯ: ಮಕ್ಕಳಿಗೆ ರಜೆ ಮೂಡ್‌ ಆರಂಭ

12:43 AM Apr 16, 2023 | Team Udayavani |

ಉಡುಪಿ: ಈಗಾಗಲೇ 1ರಿಂದ 9ನೇ ತರಗತಿಗಳಿಗೆ ರಜೆ ಆರಂಭವಾಗಿದೆ. ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಗಿದು ಬೇಸಗೆ ರಜಾ ಘೋಷಿಸಲಾಗಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಎ. 15ಕ್ಕೆ ಮುಕ್ತಾಯಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷ ಆರಂಭದವರೆಗೂ ವಿದ್ಯಾರ್ಥಿಗಳಿಗೆ ರಜೆ ಇರಲಿದೆ.
ಈಗಾಗಲೇ ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿ ಗಳಿಗೆ ರಜೆ ಮೂಡ್‌ ಆರಂಭವಾಗಿದ್ದು, ಬಹುತೇಕ ಮಕ್ಕಳು ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡು ವುದು, ಪಾಲಕ, ಪೋಷಕರೊಂದಿಗೆ ಟ್ರಿಪ್‌ ಪ್ಲಾನ್‌ ಕೂಡ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ರಂಗು, ಐಪಿಎಲ್‌ ಹವಾ ಇರುವುದರಿಂದ ವಿದ್ಯಾರ್ಥಿಗಳು ರಜೆ ಯನ್ನು ಸ್ನೇಹಿತರೊಂದಿಗೆ ಚೆನ್ನಾಗಿ ಕಳೆಯಲಿದ್ದಾರೆ.

Advertisement

ತರಬೇತಿಯೂ ಆರಂಭ
ಪಿಯುಸಿಯಲ್ಲಿ ವಾಣಿಜ್ಯ, ವಿಜ್ಞಾನ ವಿಭಾಗ ಪಡೆಯ ಬಯಸುವ ವಿದ್ಯಾರ್ಥಿಗಳು ರಜೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ಶಿಕ್ಷಣಕ್ಕೆ ಬೇಕಾದ ತರಬೇತಿಯನ್ನು ಈ ಅವಧಿಯಲ್ಲಿ ಪಡೆಯುತ್ತಾರೆ. ಪಿಯುಸಿ ಬರೆದಿರುವ ವಿದ್ಯಾರ್ಥಿಗಳು ನೀಟ್‌, ಸಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಒಂದಿ ಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಲು ಪೂರಕವಾಗಿದೆ.

ಮಕ್ಕಳ ರಜೆಗೆ ಕಾಯುತ್ತಿರುವ ಅನೇಕ ಸಂಘ ಸಂಸ್ಥೆಗಳು, ಸಂಘಟನೆಗಳು ಈಗ ಬೇಸಗೆ ಶಿಬಿರ ದಿನಾಂಕವನ್ನು ನಿಗದಿ ಮಾಡಿಕೊಂಡಿವೆ. ಮಕ್ಕಳನ್ನು ಬೆಳಗ್ಗಿನಿಂದ ಸಂಜೆಯವರೆಗೂ ಎಂಗೇಜ್‌ ಮಾಡಲು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ಬೇಸಗೆ ಶಿಬಿರವನ್ನು ಆಯೋಜಿಸುತ್ತಿವೆ. ಬಹುತೇಕ ಪಾಲಕ, ಪೋಷಕರು ತಮ್ಮ ಮಕ್ಕಳನ್ನು ಬೇಸಗೆ ಶಿಬಿರದ ಜತೆಗೆ ವಿವಿಧ ತರಬೇತಿಗಳಿಗೆ ಕಳುಹಿಸುತ್ತಾರೆ. ಈಜು, ಕ್ರಿಕೆಟ್‌ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next