Advertisement
2019-20ನೇ ಸಾಲಿನಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಒಟ್ಟು 42 ಶಾಲೆಗಳ 2,600 ವಿದ್ಯಾರ್ಥಿಗಳು 6ನೇ ತರಗತಿಯಿಂದ ಎಸೆಸೆಲ್ಸಿ ವರೆಗೆ ತುಳು ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.ಕಳೆದ ವರ್ಷ 618 ಮಂದಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಆದರೆ ಈ ವರ್ಷ(2019-20) 6ನೇ ತರಗತಿಯಲ್ಲಿ ಕೇವಲ 125 ಹಾಗೂ 7ನೇ ತರಗತಿಯಲ್ಲಿ 121 ವಿದ್ಯಾರ್ಥಿಗಳು ತುಳು ವ್ಯಾಸಂಗ ಮಾಡುತ್ತಿದ್ದಾರೆ. 8ನೇ ತರಗತಿಯಲ್ಲಿ 481 ವಿದ್ಯಾರ್ಥಿ ಗಳು ಹಾಗೂ 9ನೇ ತರಗತಿಯಲ್ಲಿ 917 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಇದನ್ನು ಗಮನಿಸಿ ದರೆ ತುಳು ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾದಂತೆ ಕಾಣುತ್ತಿದೆ.
18 ವಿದ್ಯಾರ್ಥಿಗಳು
2014-15ರಲ್ಲಿ ಮಂಗಳೂರಿನ ಪೊಂಪೈ ಶಾಲೆಯಲ್ಲಿ ಎಸೆಸೆಲ್ಸಿ ಯಲ್ಲಿ ಪ್ರಥಮ ಬ್ಯಾಚ್ ಆರಂಭ ಗೊಂಡಿದ್ದು, 18 ವಿದ್ಯಾರ್ಥಿಗಳು ತುಳು ಪಠ್ಯದಲ್ಲಿ ಪರೀಕ್ಷೆ ಬರೆದಿ ದ್ದರು. 2015-16ನೇ ಸಾಲಿನಲ್ಲಿ 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮೂರನೇ ಬ್ಯಾಚ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿ 12 ಶಾಲೆಗಳ 283 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪುತ್ತೂರಿನಲ್ಲಿ ಗರಿಷ್ಠ
ಎರಡು ಜಿಲ್ಲೆಗಳ ತಾಲೂಕು ಗಳ ಪೈಕಿ ಪುತ್ತೂರಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿದ್ದು, ಬೆಳ್ತಂಗಡಿ 2ನೇ ಸ್ಥಾನದಲ್ಲಿದೆ. ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ಈ ಬಾರಿ ಗರಿಷ್ಠ ಅಂದರೆ 197 ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ತುಳು ಪರೀಕ್ಷೆ ಬರೆಯಲಿದ್ದಾರೆ.
Related Articles
ಹಿಂದಿನ ವರ್ಷಗಳಲ್ಲಿ ತುಳು ಭಾಷಾ ವಿಷಯದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದು, ಅದೇ ಮಾದರಿಯಲ್ಲಿ ಈ ವರ್ಷವೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿದೆ. ಈ ಬಾರಿ ಎಸೆಸೆಲ್ಸಿಯಲ್ಲಿ ಒಟ್ಟು 956 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಶಾಲೆಗಳಲ್ಲಿ ಪಠ್ಯವನ್ನು ಕಲಿಸುವ ಶಿಕ್ಷಕರಿಗೆ ಅಕಾಡೆಮಿಯ ವತಿಯಿಂದ ಸಂಭಾವನೆ ನೀಡಲಾಗುತ್ತಿದೆ.
– ದಯಾನಂದ ಕತ್ತಲಸಾರ್
ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ
Advertisement
ತಾಲೂಕುವಾರು ವಿವರತಾಲೂಕು ಶಾಲೆಗಳು ವಿದ್ಯಾರ್ಥಿಗಳು
ಪುತ್ತೂರು 17 346
ಸುಳ್ಯ 2 66
ಬೆಳ್ತಂಗಡಿ 11 342
ಬಂಟ್ವಾಳ 3 57
ಮಂಗಳೂರು 4 63
ಉಡುಪಿ 5 82
ಒಟ್ಟು 956