Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶಾಂತಿಯುತ

07:06 AM Jun 26, 2020 | Lakshmi GovindaRaj |

ರಾಮನಗರ: ಕೋವಿಡ್‌-19 ಸೋಂಕು ಹರಡುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತೆ ಕ್ರಮ ಅನುಸರಿಸಿದೆ. ಸರ್ಕಾರ ನೀಡಿದ ಭರವಸೆಯೊಂದಿಗೆ  ವಿದ್ಯಾರ್ಥಿಗಳು ಹುರುಪಿನಿಂದಲೇ ಪರೀಕ್ಷೆ ಬರೆದಿದ್ದಾರೆ. ಮೊದಲ ದಿನ ದ್ವಿತೀಯ ಭಾಷೆ ಪರೀಕ್ಷೆ ನಡೆದಿದ್ದು, ಜಿಲ್ಲೆ ಯಲ್ಲಿ 493 ವಿದ್ಯಾರ್ಥಿಗಳು ಗೈರಾಗಿದ್ದರು.

Advertisement

ಜಿಲ್ಲೆಯಲ್ಲಿ 13,307 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಜಿಲ್ಲಾದ್ಯಂತ 57  ಪರೀಕ್ಷೆ ಕೇಂದ್ರಗಳಲ್ಲಿ 12,795 ಮಂದಿ ಪರೀಕ್ಷೆ ಎದುರಿಸಿ ದರು. ಡಿಬಾರ್‌ ಪ್ರಕರಣಗಳು ಕಂಡು ಬಂದಿಲ್ಲ. ಜಿಲ್ಲೆಯ ಕಂಟೈನ್‌ಮೆಂಟ್‌ ವಲಯಗಳಿಂದ ಬಂದಿದ್ದ 34 ಮಂದಿ ವಿದ್ಯಾರ್ಥಿಗಳನ್ನು ಆಯಾ ಪರೀಕ್ಷೆ ಕೇಂದ್ರದಲ್ಲಿ ಪ್ರತ್ಯೇಕವಾಗಿಡಿ ಬರೆಸಲಾಯಿತು. ದೇಹದ ಉಷ್ಣ ತಪಾಸಣೆ  ಸಂದರ್ಭದಲ್ಲಿ ಹೆಚ್ಚಿನ ಉಷ್ಣಾಂಶ ಕಂಡು ಬಂದ ಮೂರು ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಸಲಾಗಿದೆ.

ಅಧಿಕಾರಿಗಳ ಭೇಟಿ: ಯಾವ ಆತಂಕಕ್ಕೂ ಒಳಗಾಗದೆ ಪರೀಕ್ಷೆ ಎದುರಿಸಿ ಎಂದು ಜಿಲ್ಲಾಧಿಕಾರಿಗಲು, ಸಿಇಒ ಮತ್ತು ಎಸ್ಪಿಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದರು. ಗುರುವಾರ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಕೈಗೊಂಡಿರುವ  ಮುಂಜಾಗ್ರತ ಕ್ರಮ ಗಳನ್ನು ಖದ್ದು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಸಿಇಒ ಇಕ್ರಂ ಮತ್ತು ಎಸ್‌ಪಿ ಅನೂಪ್‌ ಶೆಟ್ಟಿ ಪ್ರತ್ಯೇಕವಾಗಿ ಕೆಲವು ಕೇಂದ್ರಗಳಿಗೆ ಭೇಟಿ ಕೊಟ್ಟ ಪರಿಶೀಲನೆ ನಡೆಸಿದರು. ಡಿಡಿಪಿಐ ಸೋಮಶೇಖರಯ್ಯ ರಾಮ ನಗರ  ಹಾಗೂ ಚನ್ನಪಟ್ಟಣದ ಪರೀಕ್ಷೆ ಕೇಂದ್ರಗಳಿಗೆ ಭೇಟಿಕೊಟ್ಟಿದ್ದರು.

ತೃಪ್ತಿ ವ್ಯಕ್ತಪಡಿಸಿದ ಪೋಷಕರು: ಜಿಲ್ಲೆಯ ಲ್ಲಿನ 57 ಪರೀಕ್ಷೆ ಕೇಂದ್ರದಲ್ಲೂ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಲಾ ಗಿತ್ತು. ಪ್ರತಿ ಯೊಬ್ಬ ವಿದ್ಯಾರ್ಥಿಯ ದೇಹದ  ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್‌ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡಿ ಕೊಳ್ಳುತ್ತಿದ್ದುದನ್ನು ಗಮನಿಸಿದ ಪೋಷಕರು ತೃಪ್ತಿ ವ್ಯಕ್ತಪಡಿಸಿ ದರು. ಬುಧವಾರ ಸುರಿದ ಮಳೆಯಿಂದಾಗಿ ಜಿಲ್ಲೆಯ ಒಂದೆರೆಡು ಪರೀಕ್ಷೆ ಕೇಂದ್ರಗಳಲ್ಲಿ ಸಮಸ್ಯೆ  ಎದುರಾಗಿತ್ತು. ಅದನ್ನು ನಿವಾರಿಸಿ ಪರೀಕ್ಷೆ ಬರೆಯಿಸಲಾಗಿದೆ. ಹೊರ ಜಿಲ್ಲೆ ಗಳ 54 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ.

113 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
ಕನಕಪುರ: ಕೋವಿಡ್‌ 19 ಸೋಂಕಿನ ಆತಂಕದ ನಡುವೆಯೇ ವಿದ್ಯಾರ್ಥಿಗಳು ಎಸ್‌ಎಸ್‌ಲ್‌ಸಿ ಪರೀಕ್ಷೆಯನ್ನು ಮುಕ್ತವಾಗಿ ಎದುರಿಸಿದರು. ತಾಲೂಕಿನಲ್ಲಿ 16 ಪರೀಕ್ಷೆ ಕೇಂದ್ರಗಳಲ್ಲಿ 3,939 ಪೈಕಿ 3720 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 113 ಮಂದಿ ಗೈರಾಗಿದ್ದರು. ಬೆಳಿಗ್ಗೆ 8ರಿಂದಲೇ ಪರೀಕ್ಷೆಗೆ ಬಂದ  ವಿದ್ಯಾರ್ಥಿಗಳಿಗೆ ಸ್ಕೌಟ್‌ ಮತ್ತು ಗೈಡ್ಸ್‌, ಪೊಲೀಸ್‌ ಇಲಾಖೆ, ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಮಾಸ್ಕ್, ಕೈಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಿದರು.

Advertisement

ವಿದ್ಯಾರ್ಥಿಗಳ  ದೇಹದ ಉಷ್ಣತೆ ಪರಿಶೀಲಿಸಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸಲಹೆ ಸೂಚನೆ ನೀಡಿ, ವಿದ್ಯಾರ್ಥಿಗಳು ಭಯ ಮತ್ತು ಆತಂಕ ಬಿಟ್ಟು ಪರೀಕ್ಷೆ ಎದುರಿಸಿಲು ಮುಕ್ತ ವಾತಾ ವರಣ ನಿರ್ಮಾಣ ಮಾಡಿದರು. ಆರೋಗ್ಯದಲ್ಲಿ  ವ್ಯತ್ಯಾಸವಿದೆ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ವಾರಂಟೈನ್‌ ಹಾಗೂ ಸೀಲ್‌ ಡೌನ್‌ ವಲಯದಲ್ಲಿದ್ದ 7 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳು ಪರಸ್ಪರ ಪರಿಕರಗಳ ವಿನಿಮಯ ನಿಷೇಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next