ಕೂಡ್ಲಿಗಿ: ಕೋವಿಡ್ ಸವಾಲಿನ ಮಧ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸರ್ಕಾರ ಇಲಾಖೆಗೆ ನೀಡಿರುವ ಸೂಚನೆ ಮತ್ತು ಆದೇಶದಂತೆ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು 24ಕೇಂದ್ರಗಳಲ್ಲಿ 4,362 ವಿದ್ಯಾರ್ಥಿಗಳು ಪರೀಕ್ಷೆಬರೆಯಲ್ಲಿದ್ದಾರೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮವಾಗದಂತೆ ಅತ್ಯಂತ ಜಾಗರೂಕತೆಯಿಂದ ಇಲಾಖೆ ಮಾರ್ಗ ಸೂಚಿಯಂತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಬಿಇಒ ಬಿ. ಉಮಾದೇವಿ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತ್ತು ಖಾಸಗಿ ಶಾಲೆಗಳಲ್ಲಿ ಪರೀಕ್ಷೆನಡೆಯಲ್ಲಿದ್ದು, ಸರ್ಕಾರ ದೇಶದಂತೆ ರಾಜ್ಯದಲ್ಲಿ ವಿಭಿನ್ನ ಮಾದರಿಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆರು ಪರೀಕ್ಷೆಗಳಬದಲಾಗಿ ಜು. 19 ಮತ್ತು 22 ರಂದು ಕೇವಲ ಎರಡು ಪರೀಕ್ಷೆಗಳು ನಡೆಯಲಿವೆ.
ತಪಾಸಣೆ ಕಡ್ಡಾಯ: ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನ ಮತ್ತು ಪರೀಕ್ಷೆ ಮುಗಿದ ನಂತರ ಪ್ರತಿ ಕೊನೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ10.30ಕ್ಕೆ ಪ್ರಾರಂಭವಾಗುತ್ತದೆ. ಆದರೆ ವಿದ್ಯಾರ್ಥಿಗಳು ತಮ್ಮ ಪರೀಕಾ ಕೊಠಡಿಗೆ ಕಡ್ಡಾಯವಾಗಿ ಬೆಳಗ್ಗೆ 8.30ಕ್ಕೆ ಹಾಜರಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮತ್ತು ಆಕ್ಸಿಮೀಟರ್ ಮೂಲಕ ತಪಾಸಣೆ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು.
ಪರೀಕ್ಷಾ ತಯಾರಿ ಸಿದ್ಧತೆ: ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಪ್ರತಿ ಡೆಸ್ಕ್ಗೆ ಒಬ್ಬರಂತೆ ತಲಾ 12 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಪರೀಕ್ಷೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಲಸಿಕೆ ಕನಿಷ್ಠ ಒಂದು ಡೋಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸ್ವತ್ಛತೆಗೆ ಆದ್ಯತೆ. ಪ್ರತಿಯೊಂದು ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಸ್ಯಾನಿಟೈಸರ್ ಮಾಡಿಸಲಾಗುವುದು.
ಆರೋಗ್ಯ ತಪಾಸಣೆ ಕೌಂಟರ್ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಕೋವಿಡ್ ಕೇರ್ ಸೆಂಟರ್ ಸ್ಥಾಪನೆ, ಕೆಮ್ಮು, ನೆಗಡಿ, ಜ್ವರದಂಥ ಲಕ್ಷಣಗಳು ಕಂಡುಬಂದರೆ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಒಂದು ಕೊಠಡಿಗಳು ಮೀಸಲು ಇರಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಸ್ಕಾಡ್ಸ-24 ಮಂದಿ, ಕಸ್ಟಡೀಯನ್ ಕೋ-24, ರೂಟ್ ಆಫೀಸರ್-6, ಮೊಬೈಲ್ ಸ್ಕಾಡ್ಸ್, ಸಿಆರ್‌ಪಿ ಮತ್ತು ಬಿಆರ್‌ಪಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಭಾರತ ಸ್ಕೌಟ್ಸ್-ಗೈಡ್ಸ್ ವತಿಯಿಂದ ಉಚಿತ ಮಾಸ್ಕ್ ವಿತರಣೆ. ಕೇಂದ್ರಕ್ಕೆ 2 ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ. 24 ಮಂದಿ ದೈಹಿಕ ಶಿಕ್ಷಕರ ಬಳಕೆ ಮಾಡಿಕೊಳ್ಳಲಾಗುತ್ತಿದೆ. 101 ರಿಪಿಟರ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಪೋಷಕರೇ ಮಕ್ಕಳನ್ನು ಪರೀಕ್ಷೆ ಕರೆದುಕೊಂಡು ಬರಬೇಕು. ಪರೀಕ್ಷೆ ಮುಗಿದ ನಂತರ ಕರೆದುಕೊಂಡು ಹೋಗಬೇಕು. ಹೋಬಳಿ ಮಟ್ಟದಲ್ಲಿ ಬರುವ ಕೇಂದ್ರಗಳ ಶಾಲೆಗೆ ಸ್ಯಾನಿಟೈಸರ್ ಮಾಡಿಸಲು ಪಿಡಿಒ ಸೂಚನೆ ನೀಡಿದ್ದೇನೆ. ಒಟ್ಟಾರೆ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ನಡೆಸಲು ಕ್ರಮವಹಿಸಲಾಗಿದೆ. ಪರೀಕ್ಷೆಗೆ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಧ್ವನಿವರ್ಧಕ ಬಳಕೆ ಮಾಡಲಾಗುತ್ತದೆ. ಸಹಾಯವಾಣಿ ಇರುತ್ತೆ, ಫೋನ್ ಕರೆ ಮಾಡಿ ವಿಷಯವನ್ನು ತಿಳಿದುಕೊಳ್ಳಲು ಸಾಧ್ಯ.
–ಬಿ. ಉಮಾದೇವಿ, ಬಿಇಒ ಕೂಡ್ಲಿಗಿ
ಜಿಲ್ಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರದ ಬಳಿ 144 ಸೆಕ್ಸನ್ ಜಾರಿಗೊಳಿಸಲಾಗಿದ್ದು, ಎಲ್ಲ ತಾಲೂಕುಗಳಲ್ಲಿ ಕಟ್ಟೇಚ್ಚರವಹಿಸಲಾಗಿದೆ. ಜಿಲ್ಲಾಧಿಕಾರಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಇಲಾಖೆಗೆ ಅನುಕೂಲದ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯ 222 ಕೇಂದ್ರಗಳು, ಹಾಗೂ 42,989 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಆರೋಗ್ಯ ಕೇಂದ್ರ ವ್ಯವಸ್ಥೆ ಮಾಡಿಸಲಾಗಿದೆ. ಒಂದು ಕೊಠಡಿಗೆ 12 ಮಂದಿ ಮಾತ್ರ ಸೀಮಿತಗೊಳಿಸಲಾಗಿದೆ.
–ಸಿ.ರಾಮಪ್ಪ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ