ಚಿಕ್ಕಬಳ್ಳಾಪುರ: ಈ ಬಾರಿ ತಮ್ಮ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರಾ? ನಿಮ್ಮ ಮಕ್ಕಳು ಪರೀಕ್ಷೆ ಬರೆಯುವ ಪರೀಕ್ಷಾ ಕೇಂದ್ರದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಬೇಕೆ? ಪರೀಕ್ಷೆ ವೇಳೆ ಇಲಾಖೆ ಕೈಗೊಳ್ಳಲಿರುವ ಸುರಕ್ಷತಾ ಕ್ರಮಗಳ ಬಗ್ಗೆ ನಿಮಗೂ ತಿಳಿಯುವ ಹಂಬಲ ಇದೆಯೆ? ನಿಮಗೆ ಏನೇ ಗೊಂದಲ ಇದ್ದರೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ.
ದಿನಗಣನೆ: ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಪರೀಕ್ಷೆ ನಡೆಯದೇ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸರ್ಕಾರ ಮತ್ತೆ ಜೂ.25 ರಿಂದ ದಿನಾಂಕ ನಿಗದಿಗೊಳಿಸಿದ್ದು ಪರೀಕ್ಷೆಗೆ ದಿನಗಣನೆ ಶುರು ವಾಗಿದೆ. ಪರೀಕ್ಷೆ ನಡೆಯುತ್ತಿರುವುದಕ್ಕೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಶಿಕ್ಷಣ ಇಲಾಖೆ ಯಿಂದ ಸುಗಮ ಪರೀಕ್ಷೆಗೆ ಸಕಲ ಸಿದಟಛಿತೆಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿ ಪೋಷಕರ ಸಂದೇಶಗಳ ನಿವಾರಣೆಗೆ ಶಿಕ್ಷಣ ಇಲಾಖೆ ಸಹಾಯವಾಣಿ ಆರಂಭಿಸಿದೆ.
ಕರೆ ಮಾಡಿ ಖಚಿತಪಡಿಸಿಕೊಳ್ಳಿ. 2019- 20ನೇ ಸಾಲಿನ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯು ಜೂ.25 ರಿಂದ ಜುಲೈ 03 ರ ವರೆಗೆ ನಡೆಯಲಿದೆ. ಸದರಿ ಪರೀಕ್ಷೆಯು ಜಿಲ್ಲಾದ್ಯಂತ 64 ಕೇಂದ್ರಗಳಲ್ಲಿ ನಡೆಯಲಿದ್ದು, 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಇಲಾಖೆ ಕೂಡ ಕೋವಿಡ್ 19 ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷಿತವಾಗಿ ನಡೆಸಲು ಸಿದಟಛಿತೆ ಮಾಡಿಕೊಂಡಿದೆ.
ಪೋಷಕರ ಆತಂಕ ನಿವಾರಣೆ: ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ, ಇಲಾಖೆ ಕೈಗೊಳ್ಳಲಿರುವ ಸುರಕ್ಷತಾ ಕ್ರಮಗಳು, ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲಿಸಬೇಕಾಗಿರುವ ನಿಯಮಗಳು, ಇತರೆ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹಾಗೂ ಗೊಂದಲ ಪರಿಹರಿಸಿ ಕೊಳ್ಳಲು ಜಿಲ್ಲಾ ಹಂತದ ಸಹಾಯವಾಣಿಯನ್ನು ರಚಿಸುವ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿ ಪೋಷಕರ ಆತಂಕ ನಿವಾರಿಸಲು ಮುಂದಾಗಿದೆ.
ಅಧಿಕಾರಿಗಳ ದೂರವಾಣಿ ಸಂಖ್ಯೆ: ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಕಚೇರಿ ಉಪನಿರ್ದೇಶಕ ಎಸ್.ಜಿ ನಾಗೇಶ್ 9448999333 (9448238855). ಶಿಕ್ಷಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿ ಶಿವಲಿಂಗಯ್ಯ-9663320113, ವಿಷಯ ಪರಿವೀಕ್ಷಕರುಗಳಾದ ಕೆ.ಎನ್. ಲಕ್ಷಿಕಾಂತ್ -9900870999, ಟಿ.ಎಸ್. ಜಮೀರ್‌ಪಾಷ್ – 9902718650, ಬಿ.ವಿ ಶಿವಪ್ರಕಾಶ್-8618496796,ವಿ.ಕೃಷ್ಣಕುಮಾರಿ- 9535626738, ಆಂಜಿನಪ್ಪ-7892773118 ಹಾಗೂ ಕಚೇರಿ ವಿಳಾಸ 08156-274873 ಸಂಪರ್ಕಿಸಬಹುದು. ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಗೊಳಪಡುವ ತಾಲೂಕು ಕೇಂದ್ರಗಳ ಶಿಕ್ಷಣಾಧಿಕಾರಿಗಳ ದೂ.ಸಂಖ್ಯೆ ಹೆಚ್.ಮಹಮದ್ ಖಲೀಲ್, – ಬಾಗೇಪಲ್ಲಿ-(08150-282267) -9480695116. ಆರ್. ಶಾಂತಲಾ, ಚಿಕ್ಕಬಳ್ಳಾಪುರ-(08156-272295)-9480695 117. ಎಚ್.ಜಿ.ಸುರೇಶ್, ಚಿಂತಾಮಣಿ-(08154-252154)- 9480695118. ಶ್ರೀನಿವಾಸಮೂರ್ತಿ, ಗೌರಿಬಿದನೂರು- (08155- 285383) -9480695119. ವೆಂಕಟೇಶಪ್ಪ, ಗುಡಿಬಂಡೆ-(08156-261037) -9480695120. ಆರ್. ಶ್ರೀನಿವಾಸ್, ಶಿಡ್ಲಘಟ್ಟ-(08158-256528) -9480695121.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಜೂ.25 ರಿಂದ ಆರಂಭ ಗೊಳ್ಳಲಿವೆ. ವಿದ್ಯಾರ್ಥಿ ಪೋಷಕರ ಗೊಂದಲ, ಸಂದೇಶ, ಆತಂಕಗಳ ನಿವಾರಣೆಗೆ ಸಹಾಯವಾಣಿ ತೆರೆಯಲಾಗಿದ್ದು, ವಿದ್ಯಾರ್ಥಿ ಪೋಷಕರು ಕರೆ ಮಾಡಿ ಮಾಹಿತಿ ಪಡೆಯಬಹುದು.
-ಎಸ್.ಜಿ.ನಾಗೇಶ್, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ