Advertisement
ಒಟ್ಟು 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 5,833 ಸರಕಾರಿ ಶಾಲೆಗಳಿಂದ 3.60 ಲಕ್ಷ ವಿದ್ಯಾರ್ಥಿಗಳು, 3,605 ಅನುದಾನಿತ ಶಾಲೆಗಳಿಂದ 2.20 ಲಕ್ಷ, 6,060 ಅನುದಾನ ರಹಿತ ಶಾಲೆಗಳಿಂದ 2.61 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ 1,845 ರೆಗ್ಯುಲರ್ ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು, 1,354 ರೆಗ್ಯುಲರ್ ನಾನ್ ಕ್ಲಸ್ಟರ್, 106 ಖಾಸಗಿ ಪರೀಕ್ಷಾ ಕೇಂದ್ರಗಳಿವೆ.