ಮಂಗಳೂರು: ಎಸೆಸೆಲ್ಸಿ 2ರ ಫಲಿತಾಂಶ ಪ್ರಕಟ ಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 37.90ರಷ್ಟು ಫಲಿತಾಂಶ ದಾಖಲಾಗಿದೆ. ಈ ಬಾರಿ ಎಸೆಸೆಲ್ಸಿ ಪರೀಕ್ಷೆಗೆ 2,137 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 810 ಮಂದಿ ಉತ್ತೀರ್ಣರಾಗಿದ್ದಾರೆ.
Advertisement
ಪರೀಕ್ಷೆ ಬರೆದವರಲ್ಲಿ 1,555 ಬಾಲಕರು ಹಾಗೂ 582 ಬಾಲಕಿಯರಾಗಿದ್ದು, ಇದರಲ್ಲಿ 485 ಬಾಲಕರು ಹಾಗೂ 325 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ವಲಯ ವಾರು ಫಲಿತಾಂಶದಲ್ಲಿ ಮೂಡುಬಿದಿರೆ ಶೇ. 45.69, ಪುತ್ತೂರು ಶೇ.45.17 ಬೆಳ್ತಂಗಡಿ ಶೇ.43.48, ಮಂಗಳೂರು ಉತ್ತರ ಶೇ. 41.37, ಸುಳ್ಯ ಶೇ. 41.61,ಬಂಟ್ವಾಳ ಶೇ.28.51, ಮಂಗಳೂರು ದಕ್ಷಿಣ ಶೇ. 33 ಫಲಿತಾಂಶ ಬಂದಿದೆ ಎಂದು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅ ಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಡುಪಿ: ಉಡುಪಿ ಜಿಲ್ಲೆಯಿಂದ ಪರೀಕ್ಷೆ ಬರೆದ 973 ವಿದ್ಯಾರ್ಥಿಗಳಲ್ಲಿ 464 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.47.69ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 654 ರೆಗ್ಯುಲರ್‌ವಿದ್ಯಾರ್ಥಿಗಳಲ್ಲಿ 398 ಮಂದಿ ತೇರ್ಗಡೆಯಾಗಿ ಶೇ.60.86ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ 213 ಬಾಲಕರು, 185 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ ಐದು ಶೈಕ್ಷಣಿಕ ವಲಯಗಳಲ್ಲಿ ಕುಂದಾಪುರದ 109 , ಕಾರ್ಕಳದ 75 , ಬ್ರಹ್ಮಾವರದ 91, ಉಡುಪಿಯ 130, ಬೈಂದೂರಿನ 59 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಸರಕಾರಿ ಶಾಲೆಯ 199, ಅನುದಾನಿತ ಶಾಲೆಯ 99 ಹಾಗೂ ಖಾಸಗಿ ಶಾಲೆಯ 166 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಗ್ರಾಮೀಣ ಭಾಗದ 363 ಹಾಗೂ ನಗರ ಭಾಗದ 101 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಡಿಡಿಪಿಐ ಗಣಪತಿ ಕೆ. ತಿಳಿಸಿದ್ದಾರೆ.