Advertisement

ಎಸೆಸೆಲ್ಸಿ ಮೌಲ್ಯಮಾಪಕರು, ಸಿಬಂದಿ ಭತ್ತೆ ಪರಿಷ್ಕರಣೆ

01:09 AM Apr 14, 2022 | Team Udayavani |

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2022ನೇ ಸಾಲಿನ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು ಹಾಗೂ ಸಿಬಂದಿ ಭತ್ಯೆಯನ್ನು ಪರಿಷ್ಕರಣೆ ಮಾಡಿದೆ. ಮೌಲ್ಯಮಾಪಕರಿಗೆ ಪ್ರತೀ ಪತ್ರಿಕೆಗೆ ತಲಾ ಒಂದು ರೂ. ಹೆಚ್ಚಳ ಮಾಡಿದೆ.

Advertisement

ನಿಯಮಗಳ ಪ್ರಕಾರ ಪ್ರತೀ ವರ್ಷ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ಭತ್ಯೆಗಳನ್ನು ಪರಿಷ್ಕರಣೆ ಮಾಡಿದೆ. ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಅಧೀಕ್ಷಕರು ಹಾಗೂ ಉಪ ಮುಖ್ಯ ಅಧೀಕ್ಷಕರ ಭತ್ಯೆಯನ್ನು ಕೂಡ ಪರಿಷ್ಕರಣೆ ಮಾಡಿದೆ.

ಜಂಟಿ ಮುಖ್ಯ ಪರೀಕ್ಷಕರಿಗೆ 6,924 ರೂ.ಗಳಿಂದ 7,270ಕ್ಕೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಉಪಮುಖ್ಯ ಪರೀಕ್ಷಕರಿಗೆ 5,204 ರೂ.ಗಳಿಂದ 5,464 ರೂ.ಗಳಿಗೆ ಹೆಚ್ಚಳ ಮಾಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ದಲ್ಲಿ ಪ್ರಥಮ ಭಾಷೆ ಪತ್ರಿಕೆಗಳಿಗೆ 22 ರೂ., ದ್ವಿತೀಯ/ತೃತೀಯ ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ 20 ರೂ. ಇದ್ದು, ಎಲ್ಲ ವಿಷಯಗಳಿಗೂ ಒಂದು ರೂ. ಹೆಚ್ಚಳ ಮಾಡಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದನ್ನು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಸ್ವಾಗತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next