Advertisement

ಇಂದಿನಿಂದ ದ್ವಿತೀಯ ಪಿಯು ಮೌಲ್ಯಮಾಪನ ಪ್ರಾರಂಭ

11:24 PM Mar 22, 2024 | Team Udayavani |

ಬೆಂಗಳೂರು: ಮಾರ್ಚ್‌ ಒಂದರಿಂದ ಆರಂಭವಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಶುಕ್ರವಾರ ಮುಕ್ತಾಯಗೊಂದಿದೆ.

Advertisement

ಶುಕ್ರವಾರ ಹಿಂದಿ ಪರೀಕ್ಷೆ ನಡೆದಿದ್ದು ಯಾವುದೇ ಅಕ್ರಮ ವರದಿಯಾಗಿಲ್ಲ. ಶನಿವಾರ (ಮಾ.23)ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಮುಖ್ಯ ಮೌಲ್ಯಮಾಪಕರು ಮೌಲ್ಯಮಾಪನ ಕೇಂದ್ರಗಳಿಗೆ ಹಾಜರಾಗಿ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಮೂಲಗಳ ಪ್ರಕಾರ ಸುಮಾರು 55 ಸಾವಿರ ಮಂದಿ ಮೌಲ್ಯಮಾಪನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು 38 ಸಾವಿರ ಮಂದಿ ಮೌಲ್ಯಮಾಪಕರಿಗೆ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ ಕಳುಹಿಸಲಾಗಿದೆ.

ಇನ್ನೆರಡು ವಾರ್ಷಿಕ ಪರೀಕ್ಷೆಗಳಿರುವುದು ಮತ್ತು ರಾಜ್ಯದಲ್ಲಿ ಎರಡು ಹಂತದಲ್ಲಿ (ಏ.26 ಮತ್ತು ಮೇ 7) ರಂದು ಲೋಕಸಭಾ ಚುನಾವಣೆಗಳಿರುವುದರಿಂದ ಆದಷ್ಟು ತ್ವರಿತವಾಗಿ ವಾರ್ಷಿಕ ಪರೀಕ್ಷೆ-1ರ ಫ‌ಲಿತಾಂಶ ನೀಡಬೇಕೆಂದು ಪರೀಕ್ಷಾ ಮಂಡಳಿ ಬಯಸಿದೆ.

Advertisement

Udayavani is now on Telegram. Click here to join our channel and stay updated with the latest news.

Next