Advertisement

ಜುಲೈ ಅಂತ್ಯಕ್ಕೆ ಪಿಯು, ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ

06:41 PM Jun 29, 2020 | keerthan |

ಚಿಕ್ಕಬಳ್ಳಾಪುರ: ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಹಾಗೂ ಜುಲೈ ಅಂತ್ಯದ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಪದ್ಧತಿ ಅನುಷ್ಟಾನಕ್ಕೆ ತರಲಾಗುವುದು. ಅದಕ್ಕೂ ಮೊದಲು ರಾಜ್ಯದ ಹಿನ್ನಲೆ ಗಮನದಲ್ಲಿ ಇಟ್ಟುಕೊಂಡು ಜೊತೆಗೆ ತಜ್ಞರ ಅಭಿಪ್ರಾಯ ಪಡೆದ ನಂತರ‌ ಯಾವ ರೀತಿಯಲ್ಲಿ ಆನ್ ಲೈನ್ ಶಿಕ್ಷಣ ‌ಜಾರಿಗೆ ತರಬೇಕು‌ ಎಂಬುದನ್ನು‌ ನಿರ್ಧರಿಸುತ್ತೇವೆ ಎಂದರು.

ಎಲ್ ಕೆಜಿ ಹಾಗೂ ಯುಕೆಜಿಗೆ ಆನ್ ಲೈನ್ ಶಿಕ್ಷಣ ಜಾರಿ ಇಲ್ಲ.‌ ಮಾಡಬಾರದು ಕೂಡ. ಆದರೆ ಒಂದರಿಂದ ಆರು, ಏಳರಿಂದ ಹತ್ತನೇ ತರಗತಿಯವರೆಗೆ  ಯಾವ ರೀತಿ ಆನ್ ಲೈನ್ ಶಿಕ್ಷಣ ಅನ್ನುವುದಕ್ಕಿಂತ ತಂತ್ರಜ್ಞಾನ ಬಳಸಿ ಮಕ್ಕಳಿಗೆ‌ ಯಾವ ರೀತಿ ಪಠ್ಯ ಬೋಧನೆ ಮಾಡಬೇಕು ಎಂಬುದನ್ನು ತಜ್ಞರ ಸಮಿತಿ ನೀಡುವ  ವರದಿ ಆಧಾರಿಸಿ ‌ಸರ್ಕಾರ ಕ್ರಮ ಕೈಗೊಳ್ಳಿದೆ ಎಂದರು.

Advertisement

ರಾಜ್ಯದಲ್ಲಿ ಎಸ್ಎಸ್ಎಲ್ ಸಿಪರೀಕ್ಷೆ‌ ಸುಸೂತ್ರವಾಗಿ ನಡೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ಗೈರು ಹಾರಿಯಲ್ಲಿ‌ ಅಷ್ಟೊಂದು‌ ವ್ಯತ್ಯಾಸ‌ ಆಗಿಲ್ಲ. ಮಕ್ಕಳಿಗೆ‌ ಪರೀಕ್ಷಾ ಕೇಂದ್ರಗಳು ಸುರಕ್ಷಿತ ಕೇಂದ್ರಗಳಾಗಿವೆ. ಮಕ್ಕಳು‌ ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.

ಸಚಿವ ಸುರೇಶ್ ಕುಮಾರ್ ಇದೇ ನಗರದ ಬಿಬಿ ರಸ್ತೆಯಲ್ಲಿ ಇರುವ ಸರ್ಕಾರಿ ಪ್ರೌಢ ಶಾಲೆ, ಬಿಜಿಎಸ್. ನ್ಯೂ ಹೊರೈಜಾನ್, ಸಂತ‌ ಜೋಸೆಂಪ್ ಮತ್ತಿತರ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಆರಂಭ ಕ್ಕೂ ‌ಮೊದಲು ಭೇಟಿ ನೀಡಿ ಪರಿಶೀಲಿಸಿ‌ ಮಕ್ಕಳಿಗೆ‌ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next