Advertisement

ಎಸೆಸೆಲ್ಸಿ ಮೌಲ್ಯಮಾಪನ ಆರಂಭ: ಶೇ. 70ರಿಂದ 80ರಷ್ಟು ಮೌಲ್ಯಮಾಪಕರು ಭಾಗಿ

02:02 AM Jul 14, 2020 | Hari Prasad |

ಬೆಂಗಳೂರು: ಕೋವಿಡ್ 19 ಆತಂಕದ ನಡುವೆ ಎಸೆಸೆಲ್ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದ್ದು, ಶೇ.70ರಿಂದ 80 ಮೌಲ್ಯಮಾಪಕರು ಭಾಗವಹಿಸಿದ್ದಾರೆ.

Advertisement

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೌಲ್ಯಮಾಪನ ಮುಂದೂಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮೌಲ್ಯಮಾಪನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗೊಂದಲವಿಲ್ಲದೆ ನಡೆದಿದೆ.

ನಿಗದಿಪಡಿಸಿರುವ ಉತ್ತರ ಪತ್ರಿಕೆಗಳಿಗೆ ಅನುಗುಣವಾಗಿ ಶೇ.70ರಿಂದ 80ರಷ್ಟು ಮೌಲ್ಯ ಮಾಪಕರು ಮೊದಲ ದಿನ ಹಾಜರಾಗಿದ್ದಾರೆ. ಆನ್‌ಲೈನ್‌ ಅಂಕ ದಾಖಲೀಕರಣವೂ ನಡೆದಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ಮಾಹಿತಿ ನೀಡಿದ್ದಾರೆ.

ಸರಕಾರವು ಎರಡು ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಇಲ್ಲಿ ಮೌಲ್ಯಮಾಪನ ಮುಂದೂಡಲಾಗಿದೆ. ಉಳಿದೆಡೆ ಮುಂದುವರಿಕೆ ಅಥವಾ ಮುಂದೂಡಿಕೆ ಲಾಕ್‌ಡೌನ್‌ ಆದೇಶ ಬಂದ ಬಳಿಕ ಸರಕಾರದ ಮಟ್ಟದಲ್ಲಿಯೇ ತೀರ್ಮಾನವಾಗಲಿದೆ ಎಂದರು.

ಪ್ರಥಮ ಪಿಯುಸಿ ಪೂರಕ ಪರೀಕ್ಷೆ ರದ್ದು
ಕೋವಿಡ್ 19 ಭೀತಿ ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು ರದ್ದು ಮಾಡಿದೆ. ಆದರೆ ಅನಾರೋಗ್ಯ ಮೊದಲಾದ ಕಾರಣಕ್ಕಾಗಿ ಒಂದು ಪರೀಕ್ಷೆಗೂ ಹಾಜರಾಗದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಆರಂಭದಲ್ಲಿ ಕಿರು ಪರೀಕ್ಷೆ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ಪೂರಕ ಪರೀಕ್ಷೆ ರದ್ದು ಮಾಡಿದ್ದೇವೆ.

Advertisement

ಪರೀಕ್ಷೆ ಬರೆದು, ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಪಾಸ್‌ ಮಾಡುತ್ತೇವೆ. ಹಾಗೆಯೇ ಒಂದು ಪರೀಕ್ಷೆಗೂ ಹಾಜರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ತೇರ್ಗಡೆ ಮಾಡಲಿದ್ದೇವೆ. ಆದರೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯದವರಿಗೆ ಪರೀಕ್ಷೆ ನೀಡಲು ಸಾಧ್ಯವಿಲ್ಲ ಮತ್ತು ತೇರ್ಗಡೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next