Advertisement

SS Rajamouli: ಪ್ರಭಾಸ್‌ ʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ರಾಜಮೌಳಿ ನಟನೆ?

10:30 AM Aug 30, 2023 | Team Udayavani |

ಹೈದರಾಬಾದ್: ಬಿಗೆಸ್ಟ್‌ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಸದ್ಯ ಪ್ರೊಡಕ್ಷನ್‌ ಹಂತದಲ್ಲಿದೆ. ಒಂದೇ ಒಂದು ಗ್ಲಿಂಪ್ಸ್‌ ಮೂಲಕ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

Advertisement

ಪ್ರಭಾಸ್‌ ವೃತ್ತಿ ಜೀವನದಲ್ಲಿ ಈಗಾಗಲೇ ʼಬಾಹುಬಲಿʼ, ʼಸಾಹೋʼನಂತಹ ಹೈ ಬಜೆಟ್‌ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಮುಂದಿನ ʼಸಲಾರ್ʼ ಸಿನಿಮಾ ಕೂಡ ದೊಡ್ಡ ಬಜೆಟ್‌ ನಲ್ಲಿ ತಯರಾಗುತ್ತಿರುವ ಸಿನಿಮಾವೇ. ಇದಾದ ಬಳಿಕ ಅವರು ನಾಗ್‌ ಆಶ್ವಿನ್‌ ಅವರ ʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸೈನ್ಸ್‌ ಫೀಕ್ಷನ್‌ ಸಿನಿಮಾವಾಗಲಿದ್ದು, ಟೈಟಲ್‌ ರಿವೀಲ್‌ ಮಾಡುವ ಗ್ಲಿಂಪ್ಸ್‌ ರಿಲೀಸ್‌ ಆಗಿ ಸದ್ದು ಮಾಡಿದೆ.

ಇದೇ ಸಿನಿಮಾದ ವಿಚಾರವಾಗಿ ಈಗ ಸೂಪರ್‌ ಹಿಟ್‌ ನಿರ್ದೇಶಕ ಎಸ್‌ ಎಸ್ ರಾಜಮೌಳಿ ಸುದ್ದಿಯಾಗಿದ್ದಾರೆ. ಈ ಬಾರಿ ನಿರ್ದೇಶನದ ವಿಚಾರಕ್ಕಲ್ಲ ಬದಲಾಗಿ ನಟನೆಯ ವಿಷಯವಾಗಿ. ಪ್ರಭಾಸ್‌ ಅವರ ʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ನಿರ್ದೇಶಕ ರಾಜಮೌಳಿ ಅವರು ಅತಿಥಿ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಕೆಲ ಸಿನಿಮಾಗಳಲ್ಲಿ ರಾಜಮೌಳಿ ವಿಶೇಷ ಪಾತ್ರಗಳನ್ನು ಮಾಡಿದ್ದು, ಕೆಲ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Jailer: ಓಟಿಟಿ ಬರುವ ಮುನ್ನವೇ ʼಜೈಲರ್‌ʼ HD ಪ್ರಿಂಟ್‌ ಲೀಕ್; ಎಲ್ಲೆಡೆ ಶೇರ್‌ ಆದ ಲಿಂಕ್

ಪ್ರಭಾಸ್‌ ಸಿನಿಮಾದಲ್ಲಿ ರಾಜಮೌಳಿ ನಟಿಸುವ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

Advertisement

ಈ ಹಿಂದೆ ದುಲ್ಕರ್ ಸಲ್ಮಾನ್ ಅತಿಥಿ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿಶಾ ಪಟಾನಿ, ಪಶುಪತಿ ಮತ್ತು ಶಾಶ್ವತ ಚಟರ್ಜಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next