ನವದೆಹಲಿ : ರಾಜು ಶ್ರೀವಾಸ್ತವ ನಗು, ಹಾಸ್ಯ ಮತ್ತು ಸಕಾರಾತ್ಮಕತೆಯಿಂದ ನಮ್ಮ ಜೀವನವನ್ನು ಬೆಳಗಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಖ್ಯಾತ ಹಾಸ್ಯ ನಟನ ನಿಧಾನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
”ರಾಜು ಶ್ರೀವಾಸ್ತವ ನಗು, ಹಾಸ್ಯ ಮತ್ತು ಸಕಾರಾತ್ಮಕತೆಯಿಂದ ನಮ್ಮ ಜೀವನವನ್ನು ಬೆಳಗಿಸಿದ್ದರು. ಅವರು ಬೇಗನೆ ನಮ್ಮನ್ನು ಬಿಟ್ಟು ಹೋಗಿದ್ದಾರಾದರೂ ಅಸಂಖ್ಯಾತ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಇಷ್ಟು ವರ್ಷಗಳ ಅವರ ಶ್ರೀಮಂತ ಕೆಲಸಕ್ಕೆ ಧನ್ಯವಾದಗಳು. ಅವರ ನಿಧನ ತೀವ್ರ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಪಿಎಂ ಕೇರ್ಸ್ ಫಂಡ್ ಗೆ ರತನ್ ಟಾಟಾ ಸೇರಿದಂತೆ ಹಲವು ಗಣ್ಯರು ನೂತನ ಟ್ರಸ್ಟಿಗಳಾಗಿ ನೇಮಕ
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ನಂತರ ರಾಜಕೀಯ ಪ್ರವೇಶಿಸಿದ ಶ್ರೀವಾಸ್ತವ ಅವರು ಆಸ್ಪತ್ರೆಯಲ್ಲಿ 40 ದಿನಗಳ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಅವರಿಗೆ 58 ವರ್ಷ ವಯಸಾಗಿತ್ತು.ಶ್ರೀವಾಸ್ತವ 2014ರಲ್ಲಿ ಬಿಜೆಪಿ ಸೇರಿದ್ದರು.