Advertisement
ಶ್ರೀಶೈಲ ಭ್ರಮರಾಂಬಾ ಶ್ರೀಮಲ್ಲಿಕಾರ್ಜುನ ದೇವಸ್ಥಾನದಿಂದ ಆಗಮಿಸಿದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಭ್ರಮರಾಂಬಾ ಉತ್ಸವಮೂರ್ತಿಗಳನ್ನು ವಿವಿಧ ಹೂಗಳಿಂದ ಅಲಂಕರಿಸಿದ ಮಂಟಪದಲ್ಲಿ, ಮಲ್ಲಿಕಾರ್ಜುನಸ್ವಾಮಿ ವರನಾಗಿ ಭ್ರಮರಾಂಬಾ ವಧುವಾಗಿ ಅಲಂಕರಿಸಿ ನೂತನ ವಸ್ತ್ರಗಳನ್ನು ಸಮರ್ಪಿಸಲಾಯಿತು.
ಮಾಂಗಲ್ಯಧಾರಣೆ ನಡೆಸಿ ಅಕ್ಷತಾರೋಪಣ ಮಾಡಿದರು. ಕಲ್ಯಾಣೋತ್ಸವದಲ್ಲಿ ಭಕ್ತರು ವರ ಶ್ರೀಶೈಲ ಮಲ್ಲಿಕಾರ್ಜುನ ಪರವಾಗಿ
ಹಾಗೂ ಕೆಲವರು ವಧು ಭ್ರಮರಾಂಬಾ ಪರವಾಗಿ ಆಗಮಿಸಿ ಕಲ್ಯಾಣ ಮಹೋತ್ಸವ ನೆರವೇರಿಸಿದರು. ಭಕ್ತರು ಓಂ ನಮಃ ಶಿವಾಯ
ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ಕಲ್ಯಾಣ ಮಹೋತ್ಸವ ವೀಕ್ಷಿಸಿದರು. ಅವಿವಾಹಿತರು ಸ್ವಾಮಿ ಹಾಗೂ ಮಾತೆಗೆ
ಕಟ್ಟಿರುವ ಕಂಕಣಗಳನ್ನು ಪಡೆದುಕೊಂಡು ಧರಿಸಿದರು. ಈ ಕಂಕಣಗಳನ್ನು ಧರಿಸುವುದರಿಂದ ಆದಿ ದಂಪತಿಗಳಾದ ಶಿವ ಪಾರ್ವತಿಯ ಕೃಪೆ ದೊರೆತು ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಸ್ವಾಮಿಗೆ ಕಲ್ಯಾಣ ನಡೆಸುವುದರಿಂದ
ಲೋಕ ಕಲ್ಯಾಣವಾಗುತ್ತದೆ ಹಾಗೂ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದ್ದು, ಮಳೆಯಾಗದೆ ಬರಗಾಲ
ಬಂದಾಗ ಸ್ವಯಂ ಶ್ರೀಮಲ್ಲಿಕಾರ್ಜುನ ಜ್ಯೋರ್ತಿಲಿಂಗವಾಗಿರುವ ಶಿವ ಹಾಗೂ ಭ್ರಮರಾಂಬಾ ದೇವಿಯಾಗಿರುವ ಜಗಜನನಿ
ಪಾರ್ವತಿ ಮಾತೆಯ ಕಲ್ಯಾಣ ನಡೆಸುವುದರಿಂದ ಉತ್ತಮ ಮಳೆಯಾಗಿ ನಾಡು ಸಮೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಕಲ್ಯಾಣ ಮಹೋತ್ಸವ ನಡೆಸಲಾಗುತ್ತದೆ ಎಂದು ಅರ್ಚಕ ಪಿ.ವಿ.ಎಸ್. ಶಾಸ್ತ್ರಿ ತಿಳಿಸಿದರು. ತಹಶೀಲ್ದಾರ್ ಎಂ.ಸುನೀತಾ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯಸ್ವಾಮಿ, ಎಂ.ಎಸ್.ಸೋಮಲಿಂಗಪ್ಪ, ಮುಖಂಡರಾದ
ಮಲ್ಲಿಕಾರ್ಜುನಸ್ವಾಮಿ, ಆರ್.ಬಸಲಿಂಗಪ್ಪ, ಉಂತಗಲ್ ಅಮರೇಶಪ್ಪ, ಆರ್.ಮಲ್ಲಿಕಾರ್ಜುನ, ಟಿ.ಎಂ.ಸಿದ್ದಲಿಂಗಯ್ಯಸ್ವಾಮಿ, ಟಿ.ಎಂ.
ಶಿವಕುಮಾರಸ್ವಾಮಿ, ಮರೇಗೌಡ, ವೀರೇಶ್ ಬಾಬು, ಬಿ.ಆರ್.ಚನ್ನಬಸವನಗೌಡ, ಅಯ್ಯಣ್ಣ, ಚಂದ್ರಮೌಳಿ, ಶಂಕ್ರಯ್ಯ ಇದ್ದರು.