ಶ್ರೀರಂಗಪಟ್ಟಣ : ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೈರಪ್ಪ ರೊಂದಿಗೆ ಮೇಳಾಪುರ ಗ್ರಾಮ ಪಂಚಾಯಿತಿ ಪಿಡಿಒ ಕೆಂಪಲಿಂಗೇಗೌಡ, ಅಧ್ಯಕ್ಷೆ ಅನುಪಮ ಅಕ್ರಮವೆಸಗಿರುವುದಾಗಿ ಮೇಳಾಪುರ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಆರೋಪಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಅಧ್ಯಕ್ಷರು ಹಾಗೂ ಪಿಡಿಓ ಕ್ರೀಯಾ ಯೋಜನೆಯೇ ಇಲ್ಲದೆ 9.5 ಲಕ್ಷ ನಿಧಿ 2 ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಹಂಪಾಪುರ, ಮೇಳಾಪುರ ಗ್ರಾಮಗಳಿಗೆ ಕ್ರಿಯಾ ಯೋಜನೆ ಮಾಡದೆ, ಸದಸ್ಯರುಗಳ ಗಮನಕ್ಕೂ ತರದೆ ಹೈ ಮಾಕ್ ವಿದ್ಯುತ್ ದೀಪ ಅಳವಡಿಸಿದ್ದಾರೆ.
ಸದಸ್ಯರುಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಇವರು ಎರಡು ಬಾರಿಯ ಸಾನಾನ್ಯ ಸಭೆಗೆ ಬಹುಮತವಿಲ್ಲದೆ ಸಭೆಯನ್ನು ಮೊಟಕುಗೊಳಿಸಿದ್ದಾರೆ.
ಇಓ ಬೈರಪ್ಪರೊಂದಿಗೆ ಶಾಮೀಲಾಗಿ ಇವರು, ಹಂಪಾಪುರ ಗ್ರಾಮದ ಹಾಟ್ ಸಿಟಿ ಲೇ ಔಟ್ ನಲ್ಲಿನ 160 ಸೈಟ್ ಗಳ ಈ ಸ್ವತ್ತನ್ನು ಅಕ್ರಮವಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನೀಡಿರುತ್ತಾರೆ ಎಂದು ಆರೋಪಿಸಿದರು.
ಈ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಅನಾನತು ಮಾಡಬೇಕೆಂದು ಆಗ್ರಹಿಸಿ ಗ್ರಾ.ಪಂ.ಸದಸ್ಯರಾದ ಬೆಟ್ಟೇಗೌಡ(ರಾಜು), ವೆಂಕಟೇಶ್, ಧನರಾಜ್, ಬಾಲರಾಜ್ ಹಾಗೂ ಗ್ರಾಮಸ್ಥರಾದ ರಾಮಣ್ಣ, ರಾಜಣ್ಣ, ಶ್ರೀನಿವಾಸ್, ವಿರೂಪಾಕ್ಷ, ಸುನೀಲ್, ಶ್ರೀನಿವಾಸ್, ಸುರೇಶ್ ಸೇರಿದಂತೆ ಇತರರು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ನೆನ್ನೆಯಷ್ಟೆ ಸೊಲಾರ್ ದೀಪ ದುಂದು ವೆಚ್ಚದ ಅಕ್ರಮದಲ್ಲಿ ತಾಪಂ ಇಒ ಬೈರಪ್ಪ ಅಕ್ರಮ ವೆಸಗಿ ಅಮಾನತ್ತುಗೊಂಡ ಹಿನ್ನೆಲೆ ಮೇಳಾಪುರ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮಗಳ ಸುರಿಮಳೆಗೆ ಇದೊಂದು ನಿರ್ದೇಶನವಾಗಿದೆ.