ಮಂಡ್ಯ: ತಂದೆಯೇ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಪತ್ನಿ ಮೇಲೂ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಕಲಬುರಗಿ ಮೂಲದ ಆದಿತ್ಯ (3) ಹಾಗೂ ಅಮೂಲ್ಯ (4) ತಂದೆಯಿಂದಲೇ ಹತ್ಯೆಯಾದ ಮಕ್ಕಳು. ಪತ್ನಿ ಲಕ್ಮೀ ಮೇಲೆ ಗಂಭೀರವಾಗಿ ಹಲ್ಲೆಗೊಳಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಕಾಂತ್ ಎಂಬ ವ್ಯಕ್ತಿಯೇ ತನ್ನಿಬ್ಬರ ಮಕ್ಕಳನ್ನು ಕೊಂದು ತನ್ನ ಪತ್ನಿ ಲಕ್ಷ್ಮೀಗೂ ಗಂಭೀರವಾಗಿ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ.
ಇದನ್ನೂ ಓದಿ:ಹಸಿರು ವಜ್ರ, ಉಪನಿಷತ್ ಪುಸ್ತಕ, ದಶ ದಾನ..: ಬಿಡೆನ್ ದಂಪತಿಗೆ ಮೋದಿ ಕೊಟ್ಟ ಉಡುಗೊರೆಗಳೇನು?
ಕಲಬುರಗಿ ಜಿಲ್ಲೆಯ ಜೇವರ್ಗಿಯವರಾದ ಇವರು ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದ ಅಲೆಮನೆಯಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಆದರೆ ಗುರುವಾರ ಮುಂಜಾನೆ ಪತಿ ಶ್ರೀಕಾಂತ್ ತನ್ನ ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಬಳಿಕ ಪತ್ನಿ ಲಕ್ಷ್ಮೀ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.