Advertisement
ಬಳ್ಳಾರಿಯ ತಾಳೂರ ರಸ್ತೆಯ ಸಶ್ಮಾನದಲ್ಲಿ ಸ್ವಚ್ಚತಾ ಕಾರ್ಯ ಮಾಡಿದ ಬಳಿಕ ಮಾತನಾಡಿದ ಅವರು, ಬಳ್ಳಾರಿಯ ೩೦ ಸಶ್ಮಾನಗಳ ಅಭಿವೃದ್ಧಿ ಕ್ರಮ ಕೈಗೊಂಡಿರುವೆ.ಸಶ್ಮಾನಗಳ ಅಭಿವೃದ್ಧಿಗೆ ಕಾಯಕಲ್ಪ ಕಲ್ಪಿಸುವೆ.ಸಶ್ಮಾನದಲ್ಲಿ ಅಂತ್ಯಕ್ರಿಯೆ ಆಗಮಿಸುವವರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿರುವೆ ಎಂದರು.
Related Articles
Advertisement
ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ನಾನು ರಾಜಕೀಯದಲ್ಲಿ ಇರುವವರೆಗೂ ಬಿಜೆಪಿಯಲ್ಲೆ ಇರುವೆ. ರಾಜಕೀಯ ಬೇಡ ಅಂದ್ರೆ ಮನೆಯಲ್ಲಿ ಇರುವೆ. ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲೆ ಇರುವೆ. ಸಿದ್ದರಾಮಯ್ಯ ಬಳಿ ನನ್ನ ಫೈಲ್ ಹುಡುಕಲು ಹೋಗಿದ್ದೆ.ಶಾಸಕ ನಾಗೇಂದ್ರ ಕಾಂಗ್ರೆಸ್ ಗೆ ಬರುತ್ತೀರಾ ಅಂದ್ರು. ಬರುತ್ತೇನೆ ಅಂದೆ. ಕಾಂಗ್ರೆಸ್ ಸೇರ್ಪಡೆ ಆಗುವೆ ಅಂತಾ ನಾನು ಹೇಳಿಲ್ಲ.ಕಾಂಗ್ರೆಸ್ ಹೈಕಮಾಂಡ್ ನಮ್ಮ ಕುಟುಂಬಕ್ಕೆ ಕೊಟ್ಟ ಕಷ್ಟಗಳನ್ನ ಮರೆತಿಲ್ಲ.ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಕಷ್ಟಗಳನ್ನ ಅನುಭವಿಸಿದ್ದೇವೆಕಷ್ಟಗಳನ್ನ ಅನುಭವಿಸಿ ಕಾಂಗ್ರೆಸ್ ಗೆ ಹೋಗುತ್ತೇವೆ ಅಂದ್ರೆ ನಮ್ಮಷ್ಟು ದಡ್ಡರು ಯಾರು ಇರಲ್ಲ.