Advertisement
ಭವ್ಯ ಇತಿಹಾಸ ಹೊಂದಿದ ರಾಮಮಂದಿರದಲ್ಲಿ ಮಹಾರಾಜರ ಆಡಳಿತ ಅವಧಿಯಲ್ಲಿ ದಿನನಿತ್ಯ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು. ಆದರೀಗ ನಿತ್ಯ ಪೂಜೆ-ಪುನಸ್ಕಾರಗಳು ನಡೆಯದೇ ನಿರ್ಲಕ್ಷಕ್ಕೆ ಒಳಗಾಗಿದೆ. ನಗರದ ಹೃದಯ ಭಾಗ ಎನಿಸಿದ ಗಾಂಧಿವೃತ್ತದ ಹತ್ತಿರವೇ ಶ್ರೀರಾಮಮಂದಿರ ಇದ್ದು, ಗೋಡೆ ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿದೆ. ಪ್ರದಕ್ಷಿಣೆ ಪಥದಲ್ಲಿ ಯಥೇತ್ಛವಾಗಿ ಕಸ ಬೆಳೆದಿದೆ. ತುಳಸಿ ಕಟ್ಟೆ ಸುತ್ತ ಗಿಡಗಂಟಿಗಳು ಬೆಳೆದಿದೆ. ಪೂಜೆ ಮಾಡುವವರು ಇಲ್ಲದ ಕಾರಣ ಗರ್ಭಗುಡಿಯಲ್ಲಿ ಧೂಳು ತುಂಬಿಕೊಂಡಿದೆ. ಬೀದಿ ನಾಯಿಗಳು ದೇವಸ್ಥಾನದಲ್ಲಿ ಗಲೀಜು ಮಾಡುತ್ತಿವೆ. ಸ್ವಚ್ಛತೆ ಕೈಗೊಳ್ಳುವವರೂ ಇಲ್ಲದೇ ಹಾಳು ಕೊಂಪೆಯಂತಾಗಿದೆ.
Related Articles
Advertisement
ಹಿಂದೆ ಇದಕ್ಕಿತ್ತು ನಳೆ ದೇವಸ್ಥಾನ ಹೆಸರು: ಶ್ರೀರಾಮ ಮಂದಿರವನ್ನು ಘೋರ್ಪಡೆ ಮಹಾರಾಜರ ಕಾಲದಲ್ಲಿ ನಳೆ ದೇವಸ್ಥಾನ ಎಂತಲೂ ಕರೆಯಲಾಗುತ್ತಿತ್ತು. ನಗರದ ದತ್ತನ ಕೆರೆಯಿಂದ ದೇವಸ್ಥಾನದ ಎರಡೂ ಬದಿಯಲ್ಲಿದ್ದ ಹೊಂಡಗಳಿಗೆ ನೀರು ಸರಬರಾಜು ಆಗುತ್ತಿತ್ತು. ನಗರದ ಜನತೆಗೆ ನೀರಿನ ಮೂಲವಾಗಿದ್ದ ದೇವಸ್ಥಾನಕ್ಕೆ “ನಳೆ ದೇವಸ್ಥಾನ’ ಎಂಬ ಹೆಸರಿನಿಂದ ಕರೆಯುತ್ತಿದ್ದರೆಂಬುದು ಇತಿಹಾಸ.
ನಾನು ಈಚೆಗೆ ಅಧಿಕಾರ ವಹಿಸಿಕೊಂಡಿದ್ದು, ನಗರದ ರಾಮಮಂದಿರ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಮುಜರಾಯಿ ಇಲ್ಲವೇ ಕಂದಾಯ ಇಲಾಖೆಯಡಿ ಬರುತ್ತಿದ್ದರೆ ಕೂಡಲೇ ಜೀರ್ಣೋದ್ಧಾರ ಮಾಡಿಸಿ, ನಿತ್ಯ ಪೂಜೆ-ಪುನಸ್ಕಾರ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. – ಎಸ್.ಬಿ. ಬಾಡಗಿ, ತಹಶೀಲ್ದಾರ್, ಮುಧೋಳ
-ಗೋವಿಂದಪ್ಪ ತಳವಾರ