Advertisement

ಮುತಾಲಿಕ ಸೆರೆಗೆ ಶ್ರೀರಾಮ ಸೇನೆ ಆಕ್ರೋಶ

03:48 PM Nov 19, 2021 | Team Udayavani |

ಗದಗ: ಕೋಲಾರ ಬಂದ್‌ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರನ್ನು ಬಂಧಿಸಿರುವ ಸರಕಾರದ ಕ್ರಮ ಖಂಡಿಸಿ ನಗರದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

Advertisement

ಇಲ್ಲಿಯ ಹುಯಿಲಗೋಳ ನಾರಾಯಣರಾವ ವೃತ್ತದಲ್ಲಿ ಜಮಾಯಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ರಾಜ್ಯ ಸರಕಾರ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ, ಹಿಂದುತ್ವದ ಹೆಸರಿನಲ್ಲಿಯೇ ಅಧಿ ಕಾರ ಪಡೆದಿರುವ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಹಿಂದೂ ಸಂಘಟನೆಗಳ ಪ್ರಮುಖರು, ಸ್ವಯಂಸೇವಕರ ಕೊಲೆ ಹಾಗೂ ಹಲ್ಲೆಗಳಾಗುತ್ತಿವೆ. ಅನೇಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಲಿದಾನದಿಂದ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದು ರಾಜ್ಯ ಬಿಜೆಪಿ ಸರಕಾರ ಮರೆತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರದಲ್ಲಿ ನಡೆದ ದತ್ತ ಮಾಲಾಧಾರಿಗಳ ಕೊಲೆ ಯತ್ನವನ್ನು ಖಂಡಿಸಿ ಇಂದು ಕೋಲಾರ ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದ ಮುತಾಲಿಕ್‌ ಅವರ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ಹಾಕಿ, ಕೋಲಾರ ಜಿಲ್ಲಾಡಳಿತ ನಿರ್ಬಂಧ ವಿಧಿಸುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸಿದೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ಮಹೇಶ ರೋಖಡೆ, ಬಸವರಾಜ ಕುರ್ತಕೋಟಿ, ರಾಜೂ ಗದ್ದಿ, ಸಂಜೀವ ಸೂರ್ಯವಂಶಿ, ಅಪ್ಪು ಕೊಟಗಿ, ವಿಶ್ವನಾಥ ಅಂಗಡಿ, ವಿಶ್ವನಾಥ ಶಿರಿ, ಈಶ್ವರ ಕಾಟವಾ, ಸತೀಶ ಕುಂಬಾರ, ಮಹಾಂತೇಶ ಪಾಟೀಲ, ಅಶೋಕ ಭಜಂತ್ರಿ, ಸುನೀಲ ಮುಳ್ಳಾಳ, ಪ್ರಕಾಶ ಗುಜರಾತಿ, ಕಿರಣ ಹಿರೇಮಠ, ಹುಲಿಗೆಪ್ಪ ವಾಲ್ಮೀಕಿ, ಕೃಷ್ಣಾ ಹುಣಸಿಕಟ್ಟಿ, ದೇವು ದೊಡ್ಡಮನಿ, ಕುಮಾರ ಮಿಟ್ಟಿಮಠ, ಈರಣ್ಣ ಗಾಣಿಗೇರ, ಸಾಗರ ಕಾಂಬಳೆ, ಪವನ ಚವ್ಹಾಣ, ಅನೀಲ ಗದಗೀನ, ಕಿರಣ ವಾಲ್ಮೀಕಿ, ಅರುಣ ಮರಾಠೆ, ವೀರೇಶ ಮಾನ್ವಿ, ಸುನೀಲ ಕಬಾಡಿ, ಪ್ರಕಾಶ ಗಟ್ಟಿ, ಮಹಾಬಳೇಶ ಶೆಟ್ಟರ, ವಿಶ್ವನಾಥ
ಇಟಗಿ, ಮಹಾಂತೇಶ ಕಾತರಕಿ, ಗಣೇಶ ರಂಗಂ ಮುಂತಾದವರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಲತಃ ಬಿಜೆಪಿಯವರಲ್ಲ. ಜನತಾ ಪರಿವಾರದಿಂದ ಬಂದಿದ್ದರಿಂದ ಹಿಂದೂ ವಿರೋಧಿ ನೀತಿ ಪ್ರದರ್ಶಿಸುತ್ತಿದ್ದಾರೆ. ತಕ್ಷಣವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮಧ್ಯ ಪ್ರವೇಶಿಸಿ, ಬಿಜೆಪಿ ಆಡಳಿತದಲ್ಲಿ ಹಿಂದೂಗಳಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಇಲ್ಲವೇ, ಹೊರಗಿನಿಂದ ಬಂದಿರುವ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು.
ರಾಜೂ ಖಾನಪ್ಪನವರ, ಶ್ರೀರಾಮ
ಸೇನೆ ಧಾರವಾಡ ವಿಭಾಗೀಯ ಸಂಚಾಲಕ

Advertisement
Advertisement

Udayavani is now on Telegram. Click here to join our channel and stay updated with the latest news.

Next