Advertisement

SriRama Mandir: ಮೊದಲ 6 ತಿಂಗಳಲ್ಲಿ ಅಯೋಧ್ಯೆಗೆ 11 ಕೋಟಿ ಪ್ರವಾಸಿಗರ ಭೇಟಿ

12:00 AM Sep 16, 2024 | Team Udayavani |

ಲಕ್ನೋ: ಪ್ರಸಕ್ತ ವರ್ಷದ ಮೊದಲ 6 ತಿಂಗಳಲ್ಲಿ ಅಯೋಧ್ಯೆಗೆ 11 ಕೋಟಿ ಮಂದಿ ಭೇಟಿ ನೀಡಿ ಬಾಲಕ ರಾಮನ ದರ್ಶನ ಪಡೆದಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಸರಕಾರ‌ ಮಾಹಿತಿ ನೀಡಿದೆ. ರಾಜ್ಯಕ್ಕೆ ಈ ಅವಧಿಯಲ್ಲಿ ದಾಖಲೆಯ 33 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಜೈವೀರ್‌ ಸಿಂಗ್‌ ತಿಳಿಸಿದ್ದಾರೆ.

Advertisement

4.61 ಕೋಟಿ ಪ್ರವಾಸಿಗರು ಭೇಟಿ ನೀಡುವ ಮೂಲಕ ಅಯೋಧ್ಯೆ ಯ ಅನಂತರ ಸ್ಥಾನವನ್ನು ವಾರಾಣಸಿ ಪಡೆದಿದ್ದು, ಪ್ರಯಾಗ್‌ರಾಜ್‌ ಮತ್ತು ಮಥುರಾಗಳಿಗೆ ಕ್ರಮವಾಗಿ 4.53 ಕೋಟಿ ಮತ್ತು 3.07 ಕೋಟಿ ಹಾಗೂ ಆಗ್ರಾ, ಲಕ್ನೋಗಳಿಗೆ ಕ್ರಮವಾಗಿ 69.8 ಲಕ್ಷ ಮತ್ತು 35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.ಇದರಲ್ಲಿ ವಿದೇಶಿ ಪ್ರವಾಸಿಗರು ಸೇರಿದ್ದಾರೆ. 2022ರಲ್ಲಿ ಉತ್ತರಪ್ರದೇಶಕ್ಕೆ 31.86 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next