Advertisement

ಶ್ರೀರಾಮ್‌ ಈಗ ಆಸ್ಟ್ರೇಲಿಯದ ಸಹಾಯಕ ಬೌಲಿಂಗ್‌ ಕೋಚ್‌

02:13 AM Jun 03, 2020 | Sriram |

ಮೆಲ್ಬರ್ನ್: ಐದು ವರ್ಷಗಳ ಹಿಂದೆ ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಸ್ಪಿನ್‌ ಬೌಲಿಂಗ್‌ ಸಲಹೆಗಾರನಾಗಿ ನೇಮಕಗೊಂಡ ಭಾರತದ ಎಸ್‌. ಶ್ರೀರಾಮ್‌ ಈಗ ಸಹಾಯಕ ಕೋಚ್‌ ಆಗಿ ಬಡ್ತಿ ಹೊಂದಿದ್ದಾರೆ. “ಕ್ರಿಕೆಟ್‌ ಆಸ್ಟ್ರೇಲಿಯ’ ಮಂಗಳವಾರ ತನ್ನ ಪ್ರಕಟನೆಯಲ್ಲಿ ಇದನ್ನು ತಿಳಿಸಿದೆ.

Advertisement

ತಮಿಳುನಾಡು ತಂಡದ ಪ್ರಧಾನ ಸ್ಪಿನ್ನರ್‌ ಆಗಿದ್ದ ಎಸ್‌. ಶ್ರೀರಾಮ್‌ 2015ರಲ್ಲಿ ಆಸ್ಟ್ರೇಲಿಯ ತಂಡದ ಕಣ್ಣಿಗೆ ಬಿದ್ದಿದ್ದರು. ಮುಖ್ಯವಾಗಿ ಏಶ್ಯದ ಸ್ಪಿನ್‌ ಅಂಗಳದಲ್ಲಿ ಬ್ಯಾಟಿಂಗ್‌ ನಡೆಸುವುದು ಕಾಂಗರೂ ಆಟಗಾರರಿಗೆ ಕಠಿನವಾದ ಕಾರಣ, ಅಲ್ಲಿನವರೇ ಆದ ಸ್ಪಿನ್‌ ಮಾರ್ಗದರ್ಶಿಯೊಬ್ಬರ ಅಗತ್ಯವನ್ನು ಮನಗಂಡು ಎಸ್‌. ಶ್ರೀರಾಮ್‌ ಅವರನ್ನು ನೇಮಿಸಿತ್ತು.

ಮುಂದಿದೆ ಭಾರತದ ಸವಾಲು
ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದ್ದು, ಟೀಮ್‌ ಇಂಡಿಯಾದ ಸ್ಪಿನ್‌ ದಾಳಿ ಯನ್ನು ನಿಭಾಯಿಸಿ ನಿಲ್ಲುವುದು ಆತಿಥೇಯರಿಗೆ ಸವಾಲಾಗಬಹುದು. ಅಲ್ಲಿನ ಟ್ರ್ಯಾಕ್ ಗಳು ಸ್ಪಿನ್ನಿಗೆ ನೆರವು ನೀಡುವುದಿಲ್ಲವಾದರೂ ಮುನ್ನೆಚ್ಚರಿ ಕೆಯ ಕ್ರಮವಾಗಿ “ಕ್ರಿಕೆಟ್‌ ಆಸ್ಟ್ರೇಲಿಯ’ ಎಸ್‌. ಶ್ರೀರಾಮ್‌ಗೆ ಬಡ್ತಿ ನೀಡಿರಬಹುದೆಂದು ಭಾವಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next