Advertisement

ಶ್ರೀಪಾದ ನಾಯಕ್‌ಗೆ ಎರಡು ಶಸ್ತ್ರಚಿಕಿತ್ಸೆ ಯಶಸ್ವಿ

12:40 AM Jan 13, 2021 | Team Udayavani |

ಪಣಜಿ: ಸೋಮವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕೇಂದ್ರ ಆಯುಷ್‌ ಮಂತ್ರಿ ಶ್ರೀಪಾದ ನಾಯಕ್‌ ಅವರಿಗೆ ಮಂಗಳವಾರ ಬೆಳಗ್ಗೆ ಬಾಂಬೋಲಿಂ ಆಸ್ಪತ್ರೆಯಲ್ಲಿ ನಡೆಸಲಾಗಿರುವ ಎರಡು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

Advertisement

ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರೀಪಾದ ನಾಯಕ್‌ ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಪ್ರಾಣಾಪಾ ಯವಿಲ್ಲ. ಪತ್ನಿ ವಿಜಯಾ ನಿಧನರಾ ಗಿರುವ ವಿಷಯವನ್ನು ಶ್ರೀಪಾದ ನಾಯಕ್‌ ಅವರಿಗೆ ಇದುವರೆಗೂ ತಿಳಿಸಲಾಗಿಲ್ಲ ಎನ್ನಲಾಗಿದೆ.

ನಾಯಕ್‌ ಅವರ ಪತ್ನಿ ವಿಜಯಾ ಅವರ ಮೃತದೇಹವನ್ನು ಗೋವಾಕ್ಕೆ ತರಲಾಗಿದ್ದು ಬುಧವಾರ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ. ಶ್ರೀಪಾದ ನಾಯಕ್‌ ಅವರ ಪುತ್ರರು ಅಂತಿಮ ದರ್ಶನದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಗೋವಾ ಸಿಎಂ ಪ್ರಮೋದ ಸಾವಂತ್‌ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಪಾದ ಆರೋಗ್ಯಕ್ಕೆ  ಸಂಬಂಧಿಸಿ ಆಸ್ಪತ್ರೆ ಡೀನ್‌ ಡಾ| ಬಾಂದೇಕರ್‌ ಅವರೊಂದಿಗೆ ಚರ್ಚೆ ನಡೆಸಿದರು.

ಅಗತ್ಯ ಬಿದ್ದರೆ ದಿಲ್ಲಿಗೆ ಶಿಫ್ಟ್: ರಾಜನಾಥ್‌ :

Advertisement

ಶ್ರೀಪಾದ ನಾಯಕ್‌ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಬಾಂಬೋಲಿಂ ಆಸ್ಪತ್ರೆ ವೈದ್ಯರೊಂದಿಗೆ ದಿಲ್ಲಿಯ ಏಮ್ಸ್‌ ಆಸ್ಪತ್ರೆ ವೈದ್ಯರ ತಂಡ ಸತತ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ಚಿಕಿತ್ಸೆಯನ್ನೂ ಅವರ ಮಾರ್ಗದರ್ಶನದಲ್ಲಿ ನೀಡಲಿದ್ದಾರೆ. ಅಗತ್ಯಬಿದ್ದರೆ ನಾಯಕ್‌ ಅವರನ್ನು ದಿಲ್ಲಿಗೆ ಕರೆದೊಯ್ಯಲಾಗುವುದು ಎಂದು ಕೇಂದ್ರ ರಕ್ಷಣ ಮಂತ್ರಿ ರಾಜನಾಥ್‌ ಸಿಂಗ್‌ ಮಾಹಿತಿ ನೀಡಿದರು. ಮಂಗಳವಾರ ಬಾಂಬೋಲಿಂ ಆಸ್ಪತ್ರೆಗೆ ತೆರಳಿದ ಅವರು ಶ್ರೀಪಾದ ನಾಯಕ್‌ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next