Advertisement
ಸುಪ್ರಭಾತಂ ಪೂಜೆಯಲ್ಲಿ ಸುಮಾರು 2000ಕ್ಕೂ ಅಧಿಕ ದಂಪತಿಗಳು ಪಾಲ್ಗೊಂಡು ವ್ರತವನ್ನು ಕೈಗೊಂಡಿದ್ದರು. ಅರ್ಚಕ ವಿದ್ವಾನ್ ಸಿ. ಆರ್. ಆನಂದ ತೀಥಾಚಾರ್ಯರು ಪೂಜೆಯ ಬಗ್ಗೆ ವಿವರಿಸಿ, ತಿರುಪತಿಯಲ್ಲಿ ಕಡಿಮೆ ಜನರಿಗೆ ನೋಡಲು ಸಿಗುವ ಸೇವೆ ಸುಪ್ರಭಾತಂ ಆಗಿದೆ. ಇದನ್ನು ಸರ್ವಜನತೆಯೂ ಕಾಣುವಂತಹ ಅವಕಾಶ ಇಲ್ಲಿ ಲಭಿಸಿದೆ. ತಿರುಪತಿಯ ಸುಪ್ರಭಾತಂ ಸೇವೆ ಏಳು ಬೆಟ್ಟಗಳಿಗೆ ಕೇಳುತ್ತದೆ. ಶ್ರೀ ವೆಂಕಟರಮಣ ಗೋವಿಂದ ಎನ್ನುವ ನಾಮಸ್ಮರಣೆ ಡೊಂಬಿವಲಿ ಮಹಾನಗರವನ್ನು ಪವಿತ್ರಗೊಳಿಸಿದೆ ಎಂದು ನುಡಿದರು.
ಶ್ರೀ ವೆಂಕಟರಮಣ ದೇವರ 108 ನಾಮ ಸ್ಮರಣೆ ಮಾಡುವುದರೊಂದಿಗೆ ತೋಮುಲಾ ಸೇವೆಯನ್ನು ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ನಡೆದ ಕುಂಕುಮಾರ್ಚನೆಯ ಬಗ್ಗೆ ಪುರೋಹಿತರು ವಿವರಣೆ ನೀಡಿದರು. ಸಂಸದ ಶ್ರೀಕಾಂತ್ ಏಕನಾಥ್ ಶಿಂಧೆ ಅವರು ತುಲಾಭಾರ ಸೇವೆಗೆ ಚಾಲನೆ ನೀಡಿದರು. ಬಳಿಕ ನೂರಾರು ಭಕ್ತರು ಇದರ ಪ್ರಯೋಜನವನ್ನು ಪಡೆದುಕೊಂಡರು.
ಉತ್ಸವದ ಅಂಗವಾಗಿ ಡೊಂಬಿವಲಿ ಪರಿಸರದ ಪ್ರಮುಖ ರಸ್ತೆಗಳನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದ್ದು ಭಕಾದಿಗಳನ್ನು ಉತ್ಸವ ಮಂಟಪದೆಡೆಗೆ ಕೈಬೀಸಿ ಕರೆಯುತ್ತಿದೆ.
Related Articles
Advertisement
ದೇವಾಡಿಗ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹೇಮಾನಂದ ದೇವಾಡಿಗ, ಅನ್ನದಾನ ಸೇವೆಯು ಸುಸಾಂಗವಾಗಿ ನೆರವೇರುವುದರಲ್ಲಿ ಕಿಶೋರ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಅರುಣ್ ಶೆಟ್ಟಿ, ಸೀತಾರಾಮ ಶೆಟ್ಟಿ ಪಡುಕುಡೂರು, ಭಾಸ್ಕರ ಶೆಟ್ಟಿ ಪಡುಕುಡೂರು, ಕಿಶೋರ್ ಶೆಟ್ಟಿ, ಕುಶಲಾ, ಯೋಗೇಶ್ ಶೆಟ್ಟಿ, ಮಹೇಶ್ ಶೆಟ್ಟಿ, ಮಂಜುನಾಥ್ ದೇವಾಡಿಗ ಮೊದಲಾದವರು ಸಹಕರಿಸಿದರು.
5 ಸಾವಿರಕ್ಕೂ ಅಧಿಕ ಮಂದಿ ಸುಪ್ರಭಾತಂ ಸೇವೆಯು ಶ್ರೀ ಬಾಲಾಜಿ, ಶ್ರೀದೇವಿ-ಭೂದೇವಿಯರಿಗೆ ವೈಭವದಿಂದ ನಡೆಯಿತು. ಸುಮಾರು 5 ಸಾವಿರಕ್ಕೂ ಅಧಿಕ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಿರುಪತಿಯಿಂದ ತಂದಿರುವ ಶ್ರೀನಿವಾಸ ದೇವರ ಮೂರ್ತಿ ಮತ್ತು ಶ್ರೀದೇವಿ-ಭೂದೇವಿಯ ಮೂರ್ತಿಯನ್ನು ಶಾಸ್ತೊÅàಕ್ತವಾಗಿ ಪ್ರತಿಷ್ಠಾಪಿಸಿ ಶ್ರೀನಿವಾಸ ಮಂಗಳ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದಲ್ಲಿ ಡೊಂಬಿವಲಿಯ ಪ್ರತಿಷ್ಠಿತ ಸಂಘ-ಸಂಸ್ಥೆಗಳಾದ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳ, ಕರ್ನಾಟಕ ಸಂಘ ಡೊಂಬಿವಲಿ, ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಪ್ರಾದೇಶಿಕ ಸಮಿತಿ, ಕುಲಾಲ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಶ್ರೀ ಸಾಯಿನಾಥ ಮಿತ್ರ ಮಂಡಳ, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ, ದುರ್ಗಾಂಬಿಕಾ ಭಜನಾ ಮಂಡಳ, ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆàರ್ ಫೌಂಡೇಷನ್, ಮುಂಬ್ರಾ ಮಿತ್ರ ಭಜನಾ ಮಂಡಳಿ, ಯಕ್ಷಕಲಾ ಸಂಸ್ಥೆ, ಶ್ರೀ ಮಾತಾ ಅಮೃತಾನಂದಮಯಿ ಸತ್ಸಂಗ, ಶ್ರೀ ಜಗದಂಬಾ ಮಂದಿರ ಡೊಂಬಿವಲಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಕ್ತ ಮಂಡಳಿ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ತುಳು-ಕನ್ನಡಿಗ ಭಕ್ತಾದಿಗಳು ಉಪಸ್ಥಿತರಿದ್ದು ಸಹಕರಿಸಿದರು. ಚಿತ್ರ-ವರದಿ : ರಮೇಶ್ ಉದ್ಯಾವರ