Advertisement
ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ನ ವೈಸ್ ಚಾನ್ಸಲರ್ ಡಾ| ಎಸ್. ಸಚ್ಚಿದಾನಂದ ಹಾಗೂ ಶ್ರೀನಿವಾಸ್ ಯೂನಿವರ್ಸಿಟಿಯ ಚಾನ್ಸಲರ್ ಸಿಎ ಎ. ರಾಘವೇಂದ್ರ ರಾವ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 1,400 ವಿದ್ಯಾರ್ಥಿಗಳಿಗೆ ಪದವಿ, ಓರ್ವರಿಗೆ ಪಿಎಚ್‌ಡಿ ಹಾಗೂ ಮೂವರಿಗೆ ಡಿ.ಲಿಟ್ ಪದವಿ ಪ್ರದಾನಿಸಲಾಯಿತು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಶ್ರೀ ವಿಶ್ವೇಶತೀರ್ಥರು ಮಾತನಾಡಿ, ಮಾನವ ಹೃದಯ ವಿಕಾಸಕ್ಕೆ ವಿದ್ಯೆಯೂ ಅಗತ್ಯ. ಶಿಕ್ಷಣದಿಂದ ಪ್ರಜ್ಞಾ ವಂತ ಸಮಾಜ ನಿರ್ಮಾಣವಾಗಬೇಕು. ಶ್ರೀನಿವಾಸ ಯೂನಿವರ್ಸಿಟಿಯಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಕಾರವಂತ ರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಗೌರವ ಡಾಕ್ಟರೇಟನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದ ಶ್ರೀಗಳು, ಸಂಸ್ಥೆಯು ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿದ್ಯಾನಿವಾಸವಾಗಿ ಬೆಳಗುತ್ತಿದೆ ಎಂದು ಶ್ಲಾಘಿಸಿದರು.
Related Articles
Advertisement
ಚಾನ್ಸಲರ್ ಸಿಎ ಎ. ರಾಘವೇಂದ್ರ ರಾವ್ ಪದವಿ ಪಡೆದ ವಿದ್ಯಾರ್ಥಿ ಸಮೂಹಕ್ಕೆ ಶುಭ ಕೋರಿದರು. ಸಂಸ್ಥೆಯ ಟ್ರಸ್ಟಿಗಳಾದ ಎ. ವಿಜಯಲಕ್ಷ್ಮೀ ಆರ್. ರಾವ್, ಪ್ರೊ| ಎ. ಮಿತ್ರಾ ಎಸ್. ರಾವ್, ಪದ್ಮಿನಿ ಕುಮಾರ್, ರಿಜಿಸ್ಟ್ರಾರ್ ಡಾ| ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ ಚಾನ್ಸಲರ್ ಡಾ| ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ವೈಸ್ ಚಾನ್ಸಲರ್ ಡಾ| ಪಿ.ಎಸ್. ಐತಾಳ ವರದಿ ವಾಚಿಸಿದರು. ಡಾ| ಶ್ರೀನಿವಾಸ ಮಯ್ಯ ಡಿ. ಅವರು ವಂದಿಸಿದರು.