Advertisement

ಕೇಂದ್ರದ ವಿಶೇಷ ಪ್ಯಾಕೇಜ್‌ಗೆ ಶ್ರೀನಿವಾಸ ಪ್ರಸಾದ್‌ ಮೆಚ್ಚುಗೆ

06:14 AM May 15, 2020 | Lakshmi GovindaRaj |

ಮೈಸೂರು: ಪ್ರಧಾನಿ ಮೋದಿಯವರು ಘೋಷಿಸಿದ ಐತಿಹಾಸಿಕ ಆರ್ಥಿಕ ಪ್ಯಾಕೇಜ್‌ ಸ್ವಾಗತಾರ್ಹವಾಗಿದೆ ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ನಿಂದ ಇಡೀ ವಿಶ್ವ ತತ್ತರಿಸಿ ಹೋಗಿದೆ.

Advertisement

ಯಾವುದೇ ಔಷಧ ವಿಲ್ಲದೇ ಈ ಸಾಂಕ್ರಾಮಿಕ ರೋಗಕ್ಕೆ ಸಾಮಾಜಿಕ ಅಂತರ ಮಹತ್ವದ ಮುನ್ನೆಚ್ಚ ರಿಕೆಯ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಇಡೀ ದೇಶಕ್ಕೆ ಲಾಕ್‌ಡೌನ್‌ ಕ್ರಮವನ್ನು ಮಾರ್ಚ್‌ 23ರಿಂದಲೇ ಘೋಷಿಸಿ, ಇದುವರೆಗೂ ಮುಂದುವರಿಸಿಕೊಂಡು ಬಂದಿರುವುದು ಅದರ ಪ್ರತಿಫ‌ಲವಾಗಿ ಭಾರತ ತುಂಬ ದೊಡ್ಡ ಗಂಡಾಂತರದಿಂದ ಪಾರಾಗು ವಂತಾಗಿದೆ.

ಮೇ 12ರಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳಿಂದ ತರಿಸಿಕೊಂಡ ವರದಿ  ಪರಿಶೀಲಿಸಿ, ರಾಜ್ಯಗಳು ಅನುಭವಿ ಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಪರಿ ಹರಿಸಲು 20ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹವಾದ ಐತಿಹಾಸಿಕ ತೀರ್ಮಾನವಾಗಿದೆ. ಕೊರೊನಾ ಭೀಕರ ಹೊಡೆತಕ್ಕೆ ದೇಶದ ಆರ್ಥಿಕ ಸ್ಥಿತಿ ತುಂಬಾ ಏರುಪೇರಾಗಿದೆ.

ವಿಶೇಷವಾಗಿ ಶ್ರಮಿಕ ವರ್ಗ ತುಂಬಾ ತೊಂದರೆಗೊಳಗಾಗಿದೆ. ಸಣ್ಣ ಕೈಗಾರಿಕೆಗಳು ನೆಲಕಚ್ಚುವಂತಾಗಿದೆ. ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನ ಮಂತ್ರಿಗಳು  ಘೋಷಿಸಿರುವ ಈ ವಿಶೇಷ ಪ್ಯಾಕೇಜ್‌ನ್ನು ಎಲ್ಲಿಯೂ ಸೋರಿ ಹೋಗದಂತೆ ಮಧ್ಯವರ್ತಿಗಳು ಬಾಯಿ ಹಾಕದಂತೆ ಜಾಗ್ರತೆ ವಹಿಸಿ ದಕ್ಷತೆಯಿಂದ ಅನುಷ್ಠಾನಗೊಳಿಸಿದರೆ ಪ್ರಧಾನಿಯವರ ಭಾರತವನ್ನು ಸ್ವಾವಲಂಬಿ ರಾಷ್ಟ್ರವಾಗಿಸಬೇಕೆಂಬ  ಕನಸು ನನಸಾಗಲಿದೆ.

ಈ ಮಹಾನ್‌ ಕಾರ್ಯದಲ್ಲಿ ರಾಜ ಕಾರಣಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಸಹಕರಿಸುವುದು ಅಗತ್ಯವಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next