Advertisement
ಕಲ್ಪತರು ನಾಡಿನ ಅಭಿವೃದ್ಧಿಗೆ ಪೂರಕವಾಗು ವಂತೆ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆತಿದೆ. ಬುಧವಾರ ವಿಸ್ತರಣೆಗೊಂಡ ಸಚಿವ ಸಂಪುಟದಲ್ಲಿ ಜೆಡಿಎಸ್ ಪಕ್ಷದಿಂದ ನಾಲ್ಕು ಬಾರಿ ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಎಸ್.ಆರ್.ಶ್ರೀನಿವಾಸ್‌ಗೆ ಒಕ್ಕಲಿಗರ ಕೋಟಾದಡಿ, ಪಾವಗಡ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ವೆಂಕಟರಮಣಪ್ಪ ಅವರಿಗೆ ಭೋವಿ ಜನಾಂಗದ ಕೋಟಾದಡಿ ಸಚಿವ ಸ್ಥಾನ ಸಿಕ್ಕಿದೆ. ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎಂದು ಕುತೂಹಲ ಮೂಡಿದಕ್ಕೆ ತೆರೆ ಎಳೆದು ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳಿಂದಲೂ ಸಚಿವ ಸ್ಥಾನ ಸಿಕ್ಕಿರುವುದು ಸಂತಸ ಮೂಡಿದೆ.ಎಸ್.ಆರ್. ಶ್ರೀನಿವಾಸ್‌ಗೆ ಸಚಿವ ಸ್ಥಾನ: ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವಿನ ನಗೆ ಬೀರಿರುವ ಎಸ್.ಆರ್. ಶ್ರೀನಿವಾಸ್‌ಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕಿರುವುದು ಅವರ ಅಭಿಮಾನಿಗಳಲ್ಲಿ ಹರ್ಷ ಮೂಡಿದೆ. ಗುಬ್ಬಿಯಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
Related Articles
Advertisement
ಮೊದಲ ಬಾರಿ ಸಚಿವ ಸ್ಥಾನ ಪಡೆದ ಶ್ರೀನಿವಾಸ್ ನೇರ ಮಾತು, ಜನರೊಂದಿಗೆ ಬೆರೆಯುವ ಸ್ವಭಾವ ದಿಂದಲೇ ಜನರ ಮನಸ್ಸಿನಲ್ಲಿ ನೆಲೆಸಿ ನಾಲ್ಕು ಬಾರಿ ನಿರಂತರವಾಗಿ ಗೆಲುವು ಸಾಧಿಸಿರುವ ಎಸ್.ಆರ್. ಶ್ರೀನಿವಾಸ್ 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ವಿಧಾನ ಸಭೆ ಪ್ರವೇಶಿಸಿ ಆನಂತರ ಜೆಡಿಎಸ್ ಪಕ್ಷಕ್ಕೆ ಸೇರಿ 2008, 2013, 2018 ರ ವಿಧಾನ ಸಭಾ ಚುನಾವಣೆಯಲ್ಲಿ ನಿರಂತರ ಗೆಲುವು ಸಾಧಿಸಿ ಈ ಭಾಗದ ಹ್ಯಾಟ್ರಿಕ್ ಹೀರೋ ಆಗಿದ್ದಾರೆ.
ಈ ಬಾರಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇ ಬೇಕೆಂದು ಜೆಡಿಎಸ್ ಪಕ್ಷದ ವರಿಷ್ಠರಲ್ಲಿ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರು ಬಾರಿ ಒತ್ತಡ ಹಾಕಿದ್ದರು. ತುಮಕೂರಿಗೆ ದೇವೇಗೌಡರು ಬಂದಾಗಲೂ ಕಾರ್ಯಕರ್ತರು ದೇವೇಗೌಡರ ಕಾರಿಗೆ ಅಡ್ಡ ಹಾಕಿ ಪ್ರತಿಭಟಿಸಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದರು.
ಈ ಎಲ್ಲದರ ಪರಿಣಾಮವಾಗಿ ಜಿಲ್ಲೆಯ ಪ್ರಬಲ ಒಕ್ಕಲಿಗ ನಾಯಕರಾಗಿರುವ ಎಸ್.ಆರ್. ಶ್ರೀನಿವಾಸ್ ಗೆ ಸಚಿವ ಸಂಪುಟದಲ್ಲಿ ಮಂತ್ರಿಯಾಗುವ ಯೋಗ ಬಂದು ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿ ಸಿದ್ದು ಯಾವ ಖಾತೆ ಅವರಿಗೆ ದೊರಕುತ್ತದೆ ಎನ್ನುವುದು ಕುತೂಹಲವಾಗಿದೆ.
ಚಿ.ನಿ. ಪುರುಷೋತ್ತಮ್