Advertisement

ಪ್ರಕೃತಿ, ಸಂಸ್ಕ್ರತಿ ರಕ್ಷಿಸಿದರೆ ವಿಕೃತಿ ಇಲ್ಲ: ಮಹಾಬಲೇಶ್ವರ

02:26 PM Apr 13, 2022 | Team Udayavani |

ಶಿರಸಿ: ಪ್ರಕೃತಿ, ಸಂಸ್ಕ್ರತಿ ರಕ್ಷಿಸಿದರೆ ವಿಕೃತಿ ಇಲ್ಲ. ಪ್ರಕೃತಿ, ಸಂಸ್ಕ್ರತಿ ಮರೆಯಬಾರದು. ಪ್ರಕೃತಿಯನ್ನು ಪ್ರಕೃತಿಯಾಗಿಸಿಟ್ಟುಕೊಂಡರೆ ನಾಗರೀಕ ಸಮಾಜವಾಗಿ ಬೆಳೆಯಲು ಸಾಧ್ಯ ಎಂದು  ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಹೇಳಿದರು.

Advertisement

ಅವರು ಬುಧವಾರ ತಾಲೂಕಿನ ಇಸಳೂರಿನಲ್ಲಿ ಸ್ವರ್ಣವಲ್ಲೀ ನಡೆಸುವ ಶ್ರೀನಿಕೇತನ ಶಾಲೆಗೆ‌ ನೀಡಿದ ಎರಡು ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಅಸ್ವಸ್ಥ ಆಗದಂತೆ ‌ನೋಡಿಕೊಳ್ಳಬೇಕು. ಆದರೆ, ಇಂದು ಪ್ರಕೃತಿ ಮರೆತು ವಿಕೃತಿಗೊಳಿಸುವ ಬೆಳವಣಿಗೆ ನೋಡುತ್ತಿದ್ದೇವೆ. ಸಂಸ್ಕಾರಯುತವಾಗಿ ಬಾಳಬೇಕು. ಪ್ರಕೃತಿಯನ್ನು ಪ್ರಕೃತಿಯಾಗಿ ನೋಡಬೇಕು. ಅದರೊಂದಿಗೆ ಬದುಕಬೇಕು ಎಂದರು.

ವಾಹನ ಸೌಕರ್ಯ ದಿನವೂ ಇಲ್ಲದೇ ನಾನೂ ಪ್ರೌಢ‌ಶಿಕ್ಷಣದ ತನಕ ದಿನವೂ 10ಕಿಮಿ ನಡೆದು ಶಿಕ್ಷಣ ಪಡೆದವನು‌. ವಿದ್ಯಾಭ್ಯಾಸ ಇಲ್ಲದೇ ಹೋದರೆ ಬದುಕು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಸಮಾಜವು ವಿದ್ಯಾರ್ಥಿಗಳಿಗೆ ಬೇಕಾದ ಶಿಕ್ಷಣ ಸಮಾಜ ಜವಬ್ದಾರಿ ನಿರ್ವಹಿಸಬೇಕು. ಒಳ್ಳೆಯ ವಿದ್ಯಾಭ್ಯಾಸ ನಡೆಸಲು ಇದು ಅನುಕೂಲ ಆಗಲಿದೆ ಎಂದರು.

ಸ್ವರ್ಣವಲ್ಲೀ ‌ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳ ಆಶೀರ್ವಚನ ನುಡಿದು, ಶ್ರೀನಿಕೇತನ ಶಾಲೆಯಲ್ಲಿ ಭಗವದ್ಗೀತೆ ಕಡ್ಡಾಯವಾಗಿ ಆರಂಭವಾದಾಗಿನಿಂದ ನಡೆಸುತ್ತಿದ್ದೇವೆ. ಯೋಗಾಭ್ಯಾಸ‌ ಕೂಡ ನೀಡುತ್ತಿದ್ದೇವೆ. ಇದು‌ ಮಕ್ಕಳ ಏಳ್ಗೆಗೆ ನೆರವಾಗಲಿದೆ ಎಂದರು.

Advertisement

ಕರ್ಣಾಟಕ ಬ್ಯಾಂಕ್ 16.50 ಲ.ರೂ. ನೀಡಿ ಎರಡು ಕೊಠಡಿ ನೀಡಿದ್ದಾರೆ. ಸಮಾಜದಿಂದ, ಮಠದಿಂದ  ಸಂಸ್ಥೆ ನಡೆಸಲಾಗುತ್ತಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ, ಆಡಳಿತ ಮಂಡಳಿ ಅಧ್ಯಕ್ಷ ಮೇಜರ್ ರಘುನಂದನ ಹೆಗಡೆ,ಎಜಿಎಂ ರಾಜಗೋಪಾಲ ಬಿ, ಕಾಯ್ಯದರ್ಶಿ ಶಿವರಾಮ ಭಟ್ಟ, ಕರ್ಣಾಟಕ ಬ್ಯಾಂಕ್ ನ ನಾಗರಾಜ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಶ್ಯಾಂಸುಂದರ ಭಟ್ ಕಾಜಿನಮನೆ, ವೇದಾವತಿ ಹೆಗಡೆ,‌ಪ್ರಾಚಾರ್ಯ ವಸಂತ ಭಟ್ಟ, ಎನ್.ಜಿ.ಹೆಗಡೆ ಭಟ್ರಕೇರಿ ಇತರರು ಇದ್ದರು. ಕೆ.ಎನ್.ಹೊಸ್ಮನಿ ಸ್ವಾಗತಿಸಿದರು.

ಕರ್ಣಾಟಕ ಬ್ಯಾಂಕ್ ಕೇವಲ ಬ್ಯಾಂಕ್ ಅಲ್ಲ. ಸಮಾಜಮುಕಿ ಸಂಸ್ಥೆ. ಶಿಕ್ಷಣ‌ ನಮ್ಮ ಬದುಕಿನ ರಹದಾರಿ. ಸಾಮಾಜಿಕ, ಸಂಸ್ಕಾರಯುತ ಶಿಕ್ಷಣ ಸಿಗಬೇಕು.-ಮಹಾಬಲೇಶ್ವರ‌,ಎಂಡಿ, ಕರ್ಣಾಟಕ ಬ್ಯಾಂಕ್

ಕರ್ಣಾಟಕ ಬ್ಯಾಂಕ್ ಬೆಳವಣಿಗೆ‌ ಹರ್ಷ ಆಗುತ್ತದೆ. ಕೊಡುವ ಕೈ ಬೆಳೆದರೆ, ಬಲಗೊಂಡರೆ ಸಂತೋಷ ಆಗುತ್ತದೆ.-ಸ್ವರ್ಣವಲ್ಲೀ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next