ಶೃಂಗೇರಿ: ತಾಲೂಕಿನ 9 ಗ್ರಾಪಂಗಳ 86 ಸ್ಥಾನಗಳಿಗೆ ಡಿ.22 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಪಟ್ಟಣದ ವಿದ್ಯಾನಗರದ ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ನಡೆಯಿತು.
ಕೆರೆಕಟ್ಟೆ ಗ್ರಾಪಂನಲ್ಲಿ ಕೇವಲ 5 ಕ್ಷೇತ್ರವಿದ್ದು, 5 ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ಬೆಂಬಲಿತ ಹಾಗೂ ಒಬ್ಬರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಒಂದು ಮತದ ಅಂತರದ ಗೆಲುವು-ಬೇಗಾರು ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಶೈಲಾ ಬಿಜೆಪಿ ಬೆಂಬಿಲತ ಶಾರದಾ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಜಯ ಗಳಿಸಿದರು.
ಅಡ್ಡಗದ್ದೆ ಗ್ರಾಪಂನ ಬೆಳಂದೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಪುಷ್ಪಲತಾ ಜನಾರ್ದನ್ ಕಾಂಗ್ರೆಸ್‌ನ ಚಂಚಲಮಹೇಶ್ ವಿರುದ್ಧ ಒಂದು ಮತದ ಅಂತರದಿಂದ ಜಯ ಗಳಿಸಿದರು. ಕೂತಗೋಡು ಗ್ರಾಪಂನ ಬಿಜೆಪಿ ಬೆಂಬಲಿತ ರಮೇಶ್ ಕಾಂಗ್ರೆಸ್ ಬೆಂಬಲಿತ ಪ್ರಸನ್ನ ವಿರುದ್ಧ 2 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಇದನ್ನೂ ಓದಿ:ಭಯೋತ್ಪಾದನೆಗೆ ಪೂರಕವಾಗಿ ಎಸ್ ಡಿಪಿಐ ವರ್ತಿಸುತ್ತಿದೆ: ನಳಿನ್ ಕುಮಾರ್ ಕಟೀಲ್
ಅಡ್ಡಗದ್ದೆ ಗ್ರಾಪಂ ಬೆಜೆಪಿ ಬೆಂಬಲಿತ ಸುಂದರೇಶ್ 610 ಮತ ಪಡೆದು ತಮ್ಮ ಪ್ರತಿಸ್ಪ ರ್ಧಿ ಕಾಂಗ್ರೆಸ್ ಪ್ರತಿಮಾ ವಿರುದ್ಧ ದಾಖಲೆ ಮತ 351 ಅಂತರದಿಂದ ಜಯ ಗಳಿಸಿದ್ದಾರೆ. 86 ಸ್ಥಾನಗಳಲ್ಲಿ ಕೇವಲ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ನೆಮ್ಮಾರ್ ಗ್ರಾಪಂನ ಪುಟ್ಟಪ್ಪಹೆಗ್ಡೆ ಮತ್ತು ವಿದ್ಯಾರಣ್ಯಪುರ ಗ್ರಾ ಪಂ ಶಬರೀಶ್ ಪಕ್ಷೇತರರರಾಗಿ ಜಯಗಳಿಸಿದ್ದಾರೆ.