Advertisement

ಭ್ರಷ್ಟ ಅಧಿಕಾರಿಗಳ ಹಣದಾಹಕ್ಕೆ ಅಮಾಯಕ ಬಲಿ? ; ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ!

11:36 AM Jan 30, 2022 | Team Udayavani |

ಶೃಂಗೇರಿ: ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಭೂ ಹಗರಣ ;ಅಧಿಕಾರಿಗಳ ಭ್ರಷ್ಟತೆ ಮುಗ್ಧ ಯುವಕನೋರ್ವನನ್ನು ಬಲಿ ತೆಗೆದುಕೊಂಡಿದೆ .

Advertisement

ಇಲ್ಲಿನ  ತಹಸೀಲ್ದಾರ್ ವಾಹನದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜೇತ್ (26)  ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಸಮೀಪದಲ್ಲಿರುವ ಅಡಿಕೆ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣಗಳೇನು ಎಂದು ತಿಳಿದಿಲ್ಲ.

ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಹೆಗ್ತುರು ವಿಜೇತ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಆಡಳಿತ ವ್ಯವಸ್ಥೆ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ .

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಗಮನಿಸಿದಾಗ ದೊಡ್ಡವರ ದುರಾಸೆಗೆ ಅಮಾಯಕನ ಬಲಿಯಾಯಿತೇ  ಎಂಬ ಅನುಮಾನ ಕಾಡುತ್ತಿದೆ.

ಶೃಂಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು , ಪ್ರಕರಣ ದಾಖಲಾಗಿದೆ.

Advertisement

ಈ ಮಧ್ಯೆ ಶೃಂಗೇರಿಗೆ ತಹಸೀಲ್ದಾರ್ ಅವರನ್ನು ನೇಮಕ ಮಾಡುವವರೆಗೂ ಚುನಾವಣಾ ತಹಸೀಲ್ದಾರ ಎಸ್ ವಿ ಪ್ರಸಾದ್ ಅವರನ್ನು ಶೃಂಗೇರಿಯ ತಹಸೀಲ್ದಾರರಾಗಿ ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next