Advertisement

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸಹೋದರಿ ನಿಧನ

06:35 AM Oct 20, 2018 | Team Udayavani |

ಬೆಂಗಳೂರು: ಮೈಸೂರು ರಾಜವಂಶಸ್ಥ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸಹೋದರಿಯಾದ ರಾಜವಂಶಸ್ಥೆ ಪ್ರಮೋದಾದೇವಿಯವರ ನಾದಿನಿ ವಿಶಾಲಾಕ್ಷಿದೇವಿ (56) ಅನಾರೋಗ್ಯದಿಂದಾಗಿ ನಗರದಲ್ಲಿ ಶುಕ್ರವಾರ ಸಂಜೆ ನಿಧನರಾದರು.

Advertisement

ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ವಿಶಾಲಾಕ್ಷಿದೇವಿ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ ಪ್ರಮೋದಾದೇವಿಯವರು ಆರೋಗ್ಯ ವಿಚಾರಿಸಿದ್ದರು. ಆದರೆ ಶುಕ್ರವಾರ ಸಂಜೆ 4.15ಕ್ಕೆ ಬಹು ಅಂಗಾಂಗ ವೈಫ‌ಲ್ಯದಿಂದ ವಿಧಿವಶರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪಾರ್ಥಿವ ಶರೀರವನ್ನು ಬೆಂಗಳೂರು ಅರಮನೆ ಮೈದಾನದ ದಿ ರಾಯಲ್‌ ಸೆನೆಟ್‌ನಲ್ಲಿ ಕೆಲಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಮೈಸೂರಿಗೆ ಪಾರ್ಥಿವ ಶರೀರವನ್ನು ರವಾನಿಸಲಾಯಿತು.

ಮೃತ ವಿಶಾಲಾಕ್ಷಿದೇವಿಯವರು ಪತಿ ಗಜೇಂದ್ರಸಿಂಗ್‌, ಪುತ್ರ ರುದ್ರಪ್ರತಾಪ್‌ ಸಿಂಗ್‌, ಪುತ್ರಿ ಶ್ರುತಿ ದೇವಿ ಅವರನ್ನು ಅಗಲಿದ್ದಾರೆ. ಶನಿವಾರ ಬೆಳಗ್ಗೆ ಮೈಸೂರಿನ ಮಧುವನದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಪಂಡಿತ್‌ ವಿಜಯ್‌ ಕುಮಾರ್‌ ಅಂತಿಮ ವಿಧಿವಿಧಾನ ನಡೆಸಲಿದ್ದಾರೆ ಎಂದು ಕುಟುಂಬದ ಮೀನಾಕ್ಷಿದೇವಿ ಪುತ್ರ ವರ್ಚಸ್ವಿ ಶ್ರೀಕಂಠರಾಜೇ ಅರಸ್‌ ತಿಳಿಸಿದರು.

ವಿಜಯ ದಶಮಿ ದಿನದಂದೇ ವಿಶಾಲಾಕ್ಷಿದೇವಿ ಹಾಗೂ ಪ್ರಮೋದಾದೇವಿಯವರ ತಾಯಿ ಪುಟ್ಟಚಿನ್ನಮ್ಮಣ್ಣಿ (98) ಮೃತಪಟ್ಟಿದ್ದರಿಂದ ರಾಜವಂಶಸ್ಥರ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿತ್ತು. ಇಬ್ಬರ ನಿಧನಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next