Advertisement

ಸ್ಮರಣೀಯ ಕ್ರಿಕೆಟ್‌ ನಿರ್ಗಮನ ಸಾಧ್ಯವಾಗಲಿಲ್ಲ: ಶ್ರೀನಾಥ್‌ ಬೇಸರ

03:11 AM Jun 16, 2020 | Sriram |

ಬೆಂಗಳೂರು: ಜೊಹಾನ್ಸ್‌ ಬರ್ಗ್‌ನಲ್ಲಿ ನಡೆದ 2003ರ ಐಸಿಸಿ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಜಯಿಸಿದ್ದರೆ ಅದು ತನ್ನ ಪಾಲಿಗೆ ಸ್ಮರಣೀಯ ವಿದಾಯವಾಗುತ್ತಿತ್ತು, ಆದರೆ ಹಾಗಾಗಲಿಲ್ಲ ಎಂಬುದಾಗಿ “ಮೈಸೂರು ಎಕ್ಸ್‌ಪ್ರೆಸ್‌’ ಖ್ಯಾತಿಯ ಕರ್ನಾಟಕದ ವೇಗಿ ಜಾವಗಲ್‌ ಶ್ರೀನಾಥ್‌ ಬೇಸರಿಸಿದ್ದಾರೆ.

Advertisement

“ನಾವು 2003ರ ಫೈನಲ್‌ನಲ್ಲಿ ಜಯ ಗಳಿಸಬೇಕಿತ್ತು. ಆದರೆ ನಾವಂದು ವಿಶ್ವದ ಸರ್ವಶ್ರೇಷ್ಠ ತಂಡವೊಂದರ ಎದುರು ಆಡುತ್ತಿದ್ದೆವು. ಆಸ್ಟ್ರೇಲಿಯ ಪ್ರಚಂಡ ಫಾರ್ಮ್ನಲ್ಲಿತ್ತು. ಅವರ ಸಮೀಪ ಸುಳಿಯಲಿಕ್ಕೂ ಸಾಧ್ಯ ವಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಸೋತಿತು. ವೈಯಕ್ತಿಕವಾಗಿ ನನಗೆ ಏನನ್ನೂ ಸಾಧಿಸಲಿಕ್ಕಾಗಲಿಲ್ಲ. ಭಾರತ ಚಾಂಪಿಯನ್‌ ಆಗಿ ಮೂಡಿಬಂದದ್ದಿದ್ದರೆ ನನ್ನ 13 ವರ್ಷಗಳ ಕ್ರಿಕೆಟ್‌ ಜೀವನವನ್ನು ಸ್ಮರಣೀಯವಾವಗಿ ಮುಗಿಸಬ ಹುದಿತ್ತು. ಆದರೆ ಬದುಕಿನಲ್ಲಿ ನಾವು ನಿರೀಕ್ಷಿಸಿದ್ದೆಲ್ಲವೂ ಸಾಕಾರ ಗೊಳ್ಳದು’ ಎಂದು ಶ್ರೀನಾಥ್‌ ಸಂದ ರ್ಶನವೊಂದರಲ್ಲಿ ಹೇಳಿದರು.

ಅಂದು ವಾಂಡರರ್ನಲ್ಲಿ ಮೊದಲು ಬ್ಯಾಟಿಂಗ್‌ ಪಡೆದ ಆಸ್ಟ್ರೇಲಿಯ ಎರಡೇ ವಿಕೆಟಿಗೆ 359 ರನ್‌ ರಾಶಿ ಹಾಕಿತ್ತು. ಭಾರತದ ತ್ರಿವಳಿ ವೇಗಿಗಳಾದ ಜಹೀರ್‌ ಖಾನ್‌, ಜಾವಗಲ್‌ ಶ್ರೀನಾಥ್‌ ಮತ್ತು ಆಶಿಷ್‌ ನೆಹ್ರಾ ಸೇರಿಕೊಂಡು 211 ರನ್‌ ನೀಡಿದ್ದರು. ಶ್ರೀನಾಥ್‌ 10 ಓವರ್‌ಗಳಲ್ಲಿ 87 ರನ್‌ ನೀಡಿ ಬಹಳ ದುಬಾರಿಯಾಗಿದ್ದರು. ವಿಕೆಟ್‌ ಉರುಳಿಸುವಲ್ಲೂ ವಿಫ‌ಲರಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next