Advertisement

ಎರಡು ದಿನಗಳ ಬಳಿಕ ತೆರೆಯಲ್ಪಟ್ಟ ಜಮ್ಮು-ಶ್ರೀನಗರ ಹೆದ್ದಾರಿ

11:53 AM Dec 14, 2017 | Team Udayavani |

ಶ್ರೀನಗರ :  ಹಿಮಪಾತ, ಮಳೆಯಿಂದಾಗಿ ವಿವಿಧೆಡೆ ಉಂಟಾದ ಭೂಕುಸಿತಗಳ ಪರಿಣಾಮವಾಗಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿದ್ದ  ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಇಂದು ಗುರುವಾರ ಮತ್ತೆ ವಾಹನ ಸಂಚಾರಕ್ಕೆ ತೆರೆಯಲಾಗಿದೆ. 

Advertisement

ಆದರೆ 300 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಸದ್ಯಕ್ಕೆ ಒನ್‌ ವೇ ಟ್ರಾಫಿಕ್‌ ಸಂಚಾರಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತ, ಹೆದ್ದಾರಿಯಲ್ಲಿ ಶೇಕರಣೆಯಾಗಿರುವ ಕಲ್ಲು – ಮಣ್ಣು ಇತ್ಯಾದಿಗಳನ್ನು ತೆರವುಗೊಳಿಸುವುದಕ್ಕಾಗಿ ಕಳೆದ ಎರಡು ದಿನಗಳ ಕಾಲ ಹೆದ್ದಾರಿಯನ್ನು ಮುಚ್ಚಲಾಗಿತ್ತು. ತೆರವು ಕಾರ್ಯಾಚರಣೆ ಮುಗಿದಿದೆಯಾರೂ ಪ್ರತಿಕೂಲ ಹವಾಮಾನದ ಕಾರಣ ಒನ್‌ ವೇ ಟ್ರಾಫಿಕ್‌ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾರೂ ಎಲ್ಲಿಯೂ, ಮುಖ್ಯವಾಗಿ ಗುಡ್ಡ ಜರಿತ ಉಂಟಾದೆಡೆಗಳಲ್ಲಿ , ಸುರಕ್ಷೆಯ ದೃಷ್ಟಿಯಿಂದ ತಮ್ಮ ವಾಹನಗಳನ್ನು ರಸ್ತೆ ಬದಿ ಪಾರ್ಕ್‌ ಮಾಡಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next