ತಿರುವನಂತಪುರಂ: 50 ವರ್ಷದ ಒಳಗಿನ ಇಬ್ಬರು ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿದ 2 ದಿನಗಳ ಬಳಿಕ ಶುಕ್ರವಾರ ಬೆಳಗ್ಗೆ ಶ್ರೀಲಂಕಾದ 46 ರ ಹರೆಯದ ಮಹಿಳೆಯೊಬ್ಬರು ದೇವಾಲಯದೊಳಗೆ ಪ್ರವೇಶಿಸಲು ಮುಂದಾಗಿ ವಿಫಲವಾಗಿದ್ದಾರೆ.
ಮೆಟ್ಟಿಲುಗಳವರೆಗೆ ಆಗಮಿಸಿದ ಮಹಿಳೆ, ತನ್ನ ಋತು ಚಕ್ರ ನಿಂತಿದೆ , ವೈದ್ಯಕೀಯ ಪ್ರಮಾಣ ಪತ್ರವೂ ಇದೆ ಎಂದು ಹೇಳಿದರೂ ಆಕೆಗೆ ದೇವಾಲಯ ಪ್ರವೇಶಿಸಲು ಅವಕಾಶ ಲಭ್ಯವಾಗಲಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.
ಬಿಂದು ಮತ್ತು ಕನಕುದುರ್ಗಾ ಅವರು ದೇವಾಲಯ ಪ್ರವೇಶಿಸಿದ ಬೆನ್ನಲ್ಲೇ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಓರ್ವ ವ್ಯಕ್ತಿಯನ್ನು ಬಲಿ ಪಡೆದಿದ್ದು ಹಲವರು ಗಾಯಗೊಂಡಿದ್ದಾರೆ. ರಾಜ್ಯದೆಲ್ಲೆಡೆ ಉದ್ವಿಗ್ನ ಸ್ಥಿತಿ ಮುಂದುವರಿದಿದೆ.
Related Articles
ಗುರುವಾರ ರಾಜ್ಯದಲ್ಲಿ ಶಬರಿಮಲೆ ಕರ್ಮ ಸಮಿತಿ ಹರತಾಳ ನಡೆಸಿದ್ದು , ಹಲವೆಡೆ ಬಿಜೆಪಿ ಮತ್ತು ಎನ್‌ಡಿಎಫ್, ಎಲ್‌ಡಿಎಫ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಹಲವೆಡೆ ಕಲ್ಲು ತೂರಾಟವೂ ನಡೆದಿದೆ.
ಈಗಾಗಲೇ 750 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು , 600 ಕ್ಕೂ ಹೆಚ್ಚು ಜನರನ್ನು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆಯಾಗಿದೆ.
ದೇವಾಲಯದ ಪ್ರಾಂಗಣದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲೆಡೆ ಪೊಲೀಸರ ಕಾವಲು ಹಾಕಲಾಗಿದೆ.