ಗಾಲೆ: ಇಂಗ್ಲೆಂಡ್ ಕಪ್ತಾನ ಜೋ ರೂಟ್ ಡಬಲ್ ಸೆಂಚುರಿ ಬಾರಿಸಿ ಆತಿಥೇಯ ಲಂಕಾದ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದ್ದಾರೆ.
ಗಾಲೆ ಟೆಸ್ಟ್ ಪಂದ್ಯದ ತೃತೀಯ ದಿನ ಇಂಗ್ಲೆಂಡ್ ತನ್ನ ಮೊದಲ ಸರದಿಯನ್ನು 421ಕ್ಕೆ ಮುಗಿಸಿತು. ಇದರಲ್ಲಿ ರೂಟ್ ಪಾಲೇ 228 ರನ್. 321 ಎಸೆತ ನಿಭಾಯಿಸಿದ ರೂಟ್, 18 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿ ಗಾಲೆ ಅಂಗಳದಲ್ಲಿ ವಿಜೃಂಭಿಸಿದರು. ಈ ಸಾಧನೆಯ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರ್ತಿಗೊಳಿಸಿದರು.
286 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಶ್ರೀಲಂಕಾ 3ನೇ ದಿನದಾಟದ ಅಂತ್ಯಕ್ಕೆ 2ಕ್ಕೆ 156 ರನ್ ಗಳಿಸಿದೆ. ಇನ್ನೂ 130 ರನ್ ಹಿನ್ನಡೆಯಲ್ಲಿದೆ. ಕುಸಲ್ ಪೆರೆರ (62) ಮತ್ತು ಕುಸಲ್ ಮೆಂಡಿಸ್ (15) ವಿಕೆಟ್ ಉರುಳಿದ್ದು, 76 ರನ್ ಗಳಿಸಿರುವ ಲಹಿರು ತಿರಿಮನ್ನೆ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ.
ಶ್ರೀಲಂಕಾ ಇದಕ್ಕೂ ಮುನ್ನ ತವರಿನ ಟೆಸ್ಟ್ ಪಂದ್ಯಗಳಲ್ಲಿ 6 ಸಲ 250 ಪ್ಲಸ್ ರನ್ ಹಿನ್ನಡೆಗೆ ಸಿಲುಕಿದ್ದು, ಆರೂ ಸಲ ಸೋಲನುಭವಿಸಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-135 ಮತ್ತು 2 ವಿಕೆಟಿಗೆ 156 (ತಿರಿಮನ್ನೆ ಬ್ಯಾಟಿಂಗ್ 76, ಕುಸಲ್ ಪೆರೆರ 62). ಇಂಗ್ಲೆಂಡ್-421 (ರೂಟ್ 228, ಲಾರೆನ್ಸ್ 73, ಬೇರ್‌ಸ್ಟೊ 47, ದಿಲುÅವಾನ್ ಪೆರೆರ 109ಕ್ಕೆ 4, ಎಂಬುಲೆªàನಿಯ 176ಕ್ಕೆ 3, ಅಸಿತ ಫೆರ್ನಾಂಡೊ 44ಕ್ಕೆ 2).