Advertisement

ಶ್ರೀಕೃಷ್ಣ ಮಠ: ಸರ್ವಜ್ಞ ಪೀಠಕ್ಕೆ ದಾರುಶಿಲ್ಪದ ಮೆರುಗು

12:30 AM Mar 16, 2019 | Team Udayavani |

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿರುವ 800 ವರ್ಷಗಳ ಇತಿಹಾಸದ ಸರ್ವಜ್ಞ ಪೀಠವನ್ನು ಇರಿಸಿರುವ ಕೊಠಡಿಯನ್ನು ದಾರು ಶಿಲ್ಪದಿಂದ ಅಲಂಕರಿಸಲಾಗುತ್ತಿದೆ.ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಹೊನ್ನಾವರದ ಸಂದೀಪ್‌ ಆಚಾರ್ಯ ನೇತೃತ್ವದಲ್ಲಿ 22 ಮಂದಿ ಕುಶಲಕರ್ಮಿಗಳು 7 ತಿಂಗಳಿನಿಂದ ಕೆಲಸದಲ್ಲಿ ತೊಡಗಿದ್ದು, ಶೀಘ್ರ ಮುಗಿಯಲಿದೆ. ಹಳೆಯ ಗೋಡೆಗೆ ಮರದ ವಾಲ್‌ಪ್ಲೇಟ್‌ ಅಳವಡಿಸಿದ್ದು, ಅದರ ಮೇಲೆ 15 ಅಡಿ ಉದ್ದ, 15 ಅಡಿ ಅಗಲ, 7 ಅಡಿ ಎತ್ತರಕ್ಕೆ ದಾರು ಶಿಲ್ಪಗಳನ್ನು ಜೋಡಿಸಿದ್ದಾರೆ. ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನೆಲಕ್ಕೆ ಗ್ರಾನೈಟ್‌ ಆಳವಡಿಸಲಾಗಿದೆ.

Advertisement

ಅಷ್ಟ ಮಠಗಳ ವಿಗ್ರಹ
ಶಿವಾನಿ ಮರವನ್ನು ಕೊಠಡಿ ನಿರ್ಮಾಣಕ್ಕೆ ಬಳಸಿದ್ದು, ಕೊಠಡಿಯ ಮೇಲ್ಭಾಗದಲ್ಲಿ ಅಷ್ಟದಿಕಾ³ಲಕರ ಮೂರ್ತಿಗಳಿವೆ. ಒಂದು ಗೋಡೆಯಲ್ಲಿ ಅಷ್ಟ ಮಠಗಳ‌ ಪಟ್ಟದ ದೇವರ ವಿಗ್ರಹ‌ ಚಿತ್ರ ಹಾಗೂ ಇನ್ನೊಂದು ಗೋಡೆಯಲ್ಲಿ ದಶಾವತಾರದ ಶಿಲ್ಪಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ. ಬಾಗಿಲಿನಲ್ಲಿ ಮಧ್ವಾÌಚಾರ್ಯರು ಹಾಗೂ ವಾದಿರಾಜ ಸ್ವಾಮಿಗಳ ಮೂರ್ತಿಯನ್ನು ಕೆತ್ತಲಾಗಿದೆ. ವೇದವ್ಯಾಸ, ಶ್ರೀರಂಗದ ರಂಗನಾಥ, ತಿರುಪತಿಯ ಶ್ರೀನಿವಾಸ, ಬದರಿಯ ನಾರಾಯಣ ಮೂರ್ತಿಗಳ ರಚನೆ ಹೊನ್ನಾವರದಲ್ಲಿ ಪ್ರಗತಿಯಲ್ಲಿದೆ.

ಈಶಾನ್ಯದಲ್ಲಿ ಹೊಸ ಬಾಗಿಲು 
ಶ್ರೀಗಳಿಂದ ಮಂತ್ರಾಕ್ಷತೆ ಪಡೆಯಲು ಬರುವ ಭಕ್ತರ ಆಗಮನ-ನಿರ್ಗಮನಕ್ಕೆ ಈ ಕೊಠಡಿಯಲ್ಲಿ ಒಂದೇ ದ್ವಾರ ಇದ್ದು, ಈಗ ಭಕ್ತರಿಗೆ ಅನುಕೂಲವಾಗುವಂತೆ ಈಶಾನ್ಯದ ಕುಬೇರ ಮೂಲೆಯಲ್ಲಿ ಇನ್ನೊಂದು ಬಾಗಿಲು ಅಳವಡಿಸಲಾಗಿದೆ.

ನವೀಕರಣ: ಕರ್ತವ್ಯ
ಸರ್ವಜ್ಞ ಪೀಠ ನವೀಕರಣ ಆಡಂಬರವಲ್ಲ. ಗುರು ಮಧ್ವಾಚಾರ್ಯರು ಕುಳಿತು ಧ್ಯಾನ ಮಾಡಿದ ಸ್ಥಳವನ್ನು ನವೀಕರಣಗೊಳಿಸುವುದು ನಮ್ಮ ಕರ್ತವ್ಯ. ಮೊದಲ ಪರ್ಯಾಯದಲ್ಲಿ ಬೆಳ್ಳಿ ಹೊದೆಸಲಾಗಿತ್ತು. ಈಗ ಸರ್ವಜ್ಞ ಪೀಠವಿರುವ ಕೊಠಡಿಯನ್ನು ದಾರುಶಿಲ್ಪದಿಂದ ಅಲಂಕರಿಸಲಾಗುತ್ತದೆ.
– ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next