Advertisement

ಆನೆಗೊಂದಿಯಲ್ಲಿ ಶ್ರೀಕೃಷ್ಣ ದೇವರಾಯರ 551ನೇ ಜಯಂತ್ಯೋತ್ಸವ ಆಚರಣೆ

03:22 PM Jan 18, 2022 | Team Udayavani |

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಆಡಳಿತ ಇಂದಿಗೂ ಅನುಕರಣೀಯವಾಗಿದೆ ಎಂದು ಆನೆಗುಂದಿ ರಾಜ ವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು .

Advertisement

ಅವರು ತಾಲೂಕಿನ ಆನೆಗೊಂದಿಯ ಮುಖ್ಯದ್ವಾರದ ಬಳಿಯಿರುವ ಶ್ರೀ ಕೃಷ್ಣದೇವರಾಯ ಪುತ್ಥಳಿ ಬಳಿ ಶ್ರೀಕೃಷ್ಣದೇವರಾಯರ 551 ನೇ ಜಯಂತ್ಯೋತ್ಸವದ ನಿಮಿತ್ತ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು .

ದಕ್ಷಿಣ ಭಾರತದ ಪ್ರಮುಖ ಸ್ಥಳವಾಗಿರುವ ಆನೆಗೊಂದಿ ಹಂಪಿ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಲಾಗಿದೆ.ಸಂಗಮ ಸಾಳುವ ತುಳುವ ಅರವೀಡು ವಂಶದ ಮಹಾರಾಜರು ಸಾಮ್ರಾಜ್ಯವನ್ನು ಆಡಳಿತ ನಡೆಸಿದರು .ಕೆರೆ ಕಟ್ಟೆ ರಸ್ತೆ ಕಾಲುವೆ ಮತ್ತು ಪ್ರಮುಖವಾಗಿ ಸಾಂಸ್ಕೃತಿಕ ಪ್ರತೀಕವಾದ ದೇಗುಲಗಳನ್ನು ಮತ್ತು ಶಿಲ್ಪ ಕಲೆಗಳನ್ನು ನಿರ್ಮಾಣ ಮಾಡಿದರು .

ಅವರು ನಿರ್ಮಿಸಿದ ದೇಗುಲಗಳು ಶಿಲ್ಪಿಗಳನ್ನು ನಿರ್ವಹಣೆ ಮಾಡದ ಸ್ಥಿತಿ ಇಂದಿನ ಸರ್ಕಾರಕ್ಕಿದೆ ಪ್ರಮುಖವಾಗಿ ಆನೆಗೊಂದಿ ಭಾಗದಲ್ಲಿರುವ ಪುರಾತನ ಸ್ಮಾರಕಗಳು ಹನುಮನಹಳ್ಳಿಯ ಋಷ್ಯಮೂಕ ಪರ್ವತದ ಬಳಿ ಇರುವ  ಚಂದ್ರಮೌಳೇಶ್ವರ ದೇಗುಲವನ್ನು ಸಂಗಮ ವಂಶದ ಪ್ರೌಢದೇವರಾಯನ ಕಾಲದಲ್ಲಿ ನಿರ್ಮಿಸಲಾಗಿದೆ ಇದೀಗ ಬೀಳುವ ಹಂತಕ್ಕೆ ತಲುಪಿದ್ದು ಇದನ್ನು ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ರಾಜ್ಯ ಪುರಾತತ್ವ ಇಲಾಖೆ ಮತ್ತು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಾಡಬೇಕು ಈ ನಿಟ್ಟಿನಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಬೇಕಿದೆ .

ಆನೆಗೊಂದಿ ದೇಗುಲಗಳು ಕಿಷ್ಕಿಂದಾ ಅಂಜನಾದ್ರಿ ಪಂಪಾಸರೋವರ ಋಷ್ಯ ಮುಖ ಪರ್ವತ ದ ದೇಗುಲಗಳನ್ನು ಒಂದೇ ಟ್ರಸ್ಟ್ ವ್ಯಾಪ್ತಿಯಲ್ಲಿ ತಂದು ಸರಕಾರ ಅಥವಾ ಸ್ಥಳೀಯ ಜನರ ನೇತೃತ್ವದ ಟ್ರಸ್ಟಿಗೆ ಅದನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು .

Advertisement

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ ಕೋಸಗಿ ,ವಿಷ್ಣು ಆದಾಪುರ, ನಾಗಪ್ಪ ನವಲಿ,ರುದ್ರೇಶ್ ಪ್ರದೀಪ್ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next