Advertisement

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಸೌರಭ್‌ ಕ್ವಾರ್ಟರ್‌ ಫೈನಲ್‌ಗೆ

09:52 AM Nov 30, 2019 | sudhir |

ಲಕ್ನೋ: “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಕೆ. ಶ್ರೀಕಾಂತ್‌ ಮತ್ತು ಸೌರಭ್‌ ವರ್ಮ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಲಕ್ಷ್ಯ ಸೇನ್‌ ಪರಾಭವಗೊಂಡಿದ್ದಾರೆ. ವನಿತಾ ಡಬಲ್ಸ್‌ ನಲ್ಲಿ ಯುವ ಆಟಗಾರ್ತಿಯರಾದ ಶಿಮ್ರಾನ್‌ ಶಿಂಗಿ-ರಿತಿಕಾ ಠಾಕರ್‌ ಕೂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

3ನೇ ಶ್ರೇಯಾಂಕಿತ ಕೆ. ಶ್ರಿಕಾಂತ್‌ ತಮ್ಮದೇ ದೇಶದ ಪಿ.ಕಶ್ಯಪ್‌ ವಿರುದ್ಧ ಭಾರೀ ಹೋರಾಟ ನಡೆಸಿ 18-21, 22-20, 21-16 ಅಂತರದಿಂದ ಗೆದ್ದು ಮುನ್ನಡೆದರು. ಇವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಕೊರಿಯಾದ 7ನೇ ಶ್ರೇಯಾಂಕಿತ ಸುನ್‌ ವಾನ್‌ ಹೊ.

ಸೌರಭ್‌ ವರ್ಮ ಭಾರತದ ಮತ್ತೋ ರ್ವ ಸ್ಪರ್ಧಿ ಆಲಾಪ್‌ ಮಿಶ್ರಾ ವಿರುದ್ಧ 21-11, 21-18 ನೇರ ಗೇಮ್‌ಗಳ ಜಯ ಸಾಧಿಸಿದರು. ಸೌರಭ್‌ ಎದುರಾಳಿ ಥಾಯ್ಲೆಂಡ್‌ನ‌ ಕುನಾÉವುತ್‌ ವಿದಿಸರ್ನ್. ಇವರು ಭಾರತದ ಬಿ. ಸಾಯಿಪ್ರಣೀತ್‌ಗೆ 21-11, 21-17ರಿಂದ ಆಘಾತವಿಕ್ಕಿದರು.

ಲಕ್ಷ್ಯ ಸೇನ್‌ಗೆ ಸೋಲು
ಮೊನ್ನೆಯಷ್ಟೇ ಸ್ಕಾಟಿಷ್‌ ಲೀಗ್‌ ಪ್ರಶಸ್ತಿ ಗೆದ್ದು ಸುದ್ದಿಯಲ್ಲಿದ್ದ ಲಕ್ಷ್ಯ ಸೇನ್‌ ಮಾಜಿ ನಂ.1 ಆಟಗಾರ ಸುನ್‌ ವಾನ್‌ ಹೊ ವಿರುದ್ಧ ಸೋಲು ಕಾಣಬೇಕಾಯಿತು. ಇನ್ನೊಂದೆಡೆ ಪ್ರಬಲ ಹೋರಾಟದ ಬಳಿಕ ಅಜಯ್‌ ಜಯರಾಮ್‌ ಚೀನದ ಜಾವೊ ಜುನ್‌ ಪೆಂಗ್‌ ವಿರುದ್ಧ 18-21, 21-14, 28-30 ಅಂತರದ ಹಿನ್ನಡೆ ಅನುಭವಿಸಿದರು.

ಭಾರತದ 19ರ ಹರೆಯದ ಸಿರಿಲ್‌ ವರ್ಮ ಕೊರಿಯಾದ ಹೆವೊ ಕ್ವಾಂಗ್‌ ಹೀ ವಿರುದ್ಧ ನೇರ ಗೇಮ್‌ಗಳಿಂದ ಎಡವಿದರು.

Advertisement

ಹಿಂದೆ ಸರಿದ ಅಶ್ವಿ‌ನಿ-ಸಿಕ್ಕಿ ರೆಡ್ಡಿ
ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಬ್ರಿಟನ್‌ ಕ್ಲೊ ಬಿರ್ಕ್‌-
ಲಾರೆನ್‌ ಸ್ಮಿತ್‌ ವಿರುದ್ಧ ಮೊದಲ ಗೇಮ್‌ನಲ್ಲಿ 0-2 ಅಂತರದ ಹಿನ್ನಡೆಯಲ್ಲಿರು ವಾಗ ಪಂದ್ಯವನ್ನು ತ್ಯಜಿಸಿದರು. ಆದರೆ ಶಿಮ್ರಾನ್‌ ಶಿಂಗಿ-ರಿತಿಕಾ ಠಾಕರ್‌ ತವ ರಿನ ರಿಯಾ ಮುಖರ್ಜಿ-ಅನುರಾ ಪ್ರಭುದೇಸಾಯಿ ಅವರನ್ನು 21-12, 21-15 ಅಂತರದಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next