Advertisement

ಶ್ರೀಕಾಂತ್‌ ಪರಾಭವ; ಲೀಗೆ 3ನೇ ಗೇಮ್ಸ್‌ ಚಿನ್ನ

06:35 AM Apr 16, 2018 | Team Udayavani |

ಗೋಲ್ಡ್‌ಕೋಸ್ಟ್‌: ಮೊನ್ನೆಯಷ್ಟೇ ವಿಶ್ವದ ನಂಬರ್‌ ವನ್‌ ಆಟಗಾರನಾಗಿ ಮೂಡಿಬಂದ ಕೆ. ಶ್ರೀಕಾಂತ್‌ ಅವರಿಗೆ ಗೇಮ್ಸ್‌ ಚಿನ್ನ ಗೆದ್ದು ಇದನ್ನು ಸಂಭ್ರಮಿಸಲು ಸಾಧ್ಯವಾಗಲಿಲ್ಲ. 

Advertisement

ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಅವರು ಮಲೇಶ್ಯದ ಲೀ ಚಾಂಗ್‌ ವೀ ವಿರುದ್ಧ 3 ಗೇಮ್‌ಗಳ ಹೋರಾಟದಲ್ಲಿ ಸೋಲನುಭವಿಸಿದರು. 19-21, 21-14, 21-14ರಿಂದ ಗೆದ್ದ ವೀ 3ನೇ ಗೇಮ್ಸ್‌ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 2006 ಮತ್ತು 2010ರ ಗೇಮ್ಸ್‌ನಲ್ಲೂ ವೀ ಸಿಂಗಲ್ಸ್‌ ಚಿನ್ನ ಜಯಿಸಿದ್ದರು.

ಕೆ. ಶ್ರೀಕಾಂತ್‌ಗಿಂತ 10 ವರ್ಷ ಹಿರಿಯ ಆಟಗಾರನಾದ ಲೀ ಚಾಂಗ್‌ ವೀ ತಮ್ಮ ಅನುಭವವನ್ನೆಲ್ಲ ಪಣಕ್ಕಿಟ್ಟು ಹೋರಾಡಿದರು. ಮೊದಲ ಪಂದ್ಯವನ್ನು ಸಣ್ಣ ಅಂತರದಿಂದ ಕಳೆದುಕೊಂಡ ಬಳಿಕ ಉಳಿದೆರಡರಲ್ಲೂ ಪ್ರಭುತ್ವ ಮೆರೆದರು. ಮೊದಲ ಗೇಮ್‌ನಲ್ಲಿ 0-4ರ ಹಿನ್ನಡೆಯಲ್ಲಿದ್ದ ಶ್ರೀಕಾಂತ್‌ ಕೇವಲ 8 ನಿಮಿಷಗಳಲ್ಲಿ 10-7ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಬ್ರೇಕ್‌ ಬೇಳೆ ಭಾರತೀಯನ ಮುನ್ನಡೆ 11-9ರಲ್ಲಿತ್ತು. ಬಳಿಕ ಇದೇ ಅಂತರ ಮುಂದುವರಿಯುತ್ತ ಹೋಯಿತು. ಶ್ರೀಕಾಂತ್‌ 25 ನಿಮಿಷಗಳಲ್ಲಿ ಮೊದಲ ಗೇಮ್‌ ಗೆದ್ದರು.

ಆದರೆ ಇದೇ ಹೋರಾಟವನ್ನು ಮುಂದಿನ ಗೇಮ್‌ಗಳಲ್ಲಿ ಪ್ರದರ್ಶಿಸಲು ಶ್ರೀಕಾಂತ್‌ಗೆ ಸಾಧ್ಯವಾಗಲಿಲ್ಲ. ನಿರ್ಣಾ ಯಕ ಗೇಮ್‌ನಲ್ಲಿ 9-5ರ ಮುನ್ನ ಡೆಯಲ್ಲಿದ್ದಾಗ ರ್ಯಾಕೆಟ್‌ ಬದಲಿಸಿದ ವೀ ಮೇಲುಗೈ ಸಾಧಿಸುತ್ತ ಹೋದರು. ಈ ಎರಡೂ ಗೇಮ್‌ಗಳಲ್ಲಿ ಶ್ರೀಕಾಂತ್‌ ಅಂಕ 14ರ ಗಡಿ ದಾಟಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next