ಗಂಗಾವತಿ: ಬ್ರಾಹ್ಮಣರು ಸಂಘಟಿತರಾಗಲು ಹೃದಯ ವಿಶಾಲತೆ ಬೆಳೆಸಿಕೊಂಡು ಒಂದೇ ಸಂಘಟನೆಯಡಿ ಸಂಘಟಿತರಾಗಿ ಒಂದಾಗಬೇಕಾಗಿರುವುದು ಅನಿವಾರ್ಯ ಅಖಿಲ ಕರ್ನಾಟ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯದ ಮಾಜಿ ಅಡ್ವೋಕೆಟ್ ಜನರಲ್ ಅಶೋಕ ಹಾರನಹಳ್ಳಿ ಹೇಳಿದರು..
ಅವರು ತಾಲೂಕಿನ ಆನೆಗೊಂದಿ ನವವೃಂದಾವನಗಡ್ಡೆಯಲ್ಲಿ ವ್ಯಾಸರಾಜ(ರಾಯ)ರ 483ನೇ ಆರಾಧನಾ ಮಹೋತ್ಸವದಲ್ಲಿ ಶ್ರೀವ್ಯಾಸ ರಾಜಸೇವಾ ಧುರಂಧರ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದರು.
ವ್ಯಾಸರಾಜ ಗುರುಸಾರ್ವಭೌಮರು ಬ್ರಾಹ್ಮಣ ಸಮುದಾಯ ಸೇರಿ ಹಾಗೂ ಸರ್ವರಿಗೂ ಅನುಗ್ರಹಿಸಲಿ.ಬ್ರಾಹ್ಮಣರ ಸಂಘಟನೆ ಕೊರತೆಯಾಗಿರಬಹುದು ಮುಂದೆ ಹಾಗಾಗದಂತೆ ಎಲ್ಲರನ್ನು ಒಟ್ಟಿಗೆ ಸಂಘಟಿಸಿ ಮುಖ್ಯ ವಾಹಿನಿಗೆ ತರುವ ಮಹತ್ತರ ಜವಾಬ್ದಾರಿ ವಹಿಸಿದ್ದು
ಗುರುಗಳ ನೇತೃತ್ವದಲ್ಲಿಯೇ ಸರ್ವ ಬ್ರಾಹ್ಮಣರು ಸಂಘದ ಸದಸ್ಯತ್ವ ಪಡೆಯಲು ಮುಂದಾಗಬೇಕು. ಕಾಶ್ಮಿರ ಪಂಡಿತರ ಮೇಲೆ ಆದ ದೌರ್ಜನ್ಯವನ್ನು ಸಿನಿಮಾ ಮೂಲಕ ತಿಳಿಯುವ ದುಸ್ಥಿತಿ ಬಂದಿದೆ. ಸರ್ವ ಬ್ರಾಹ್ಮಣರ ಧ್ವನಿಯಾಗಿ ಬ್ರಾಹ್ಮಣ ಮಹಾಸಭಾ ಕಾರ್ಯ ನಿರ್ವಹಿಸುತ್ತದೆ ಎಂದರು.
ವ್ಯಾಸರಾಜ ಮಠದ ಪಿಠಾಧಿಪತಿಳಾದ ಶ್ರೀವಿದ್ಯಾಶ್ರೀಶ ತಿರ್ಥ ಶ್ರೀಪಾದಂಗಳು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕಂಬಾಲಿ ಸಮಿರ ಆಚಾರ್ಯ,ಮರುತ ಆಚಾರ್ಯ
ಪಂಡಿತ ಡಿಪಿ ಅನಂತಚಾರ, ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಎಂಆರ್.ವಿ ಪ್ರಸಾದ, ಮಹಾಸಭಾ ಖಜಾಂಚಿ ವಿಎಸ್.ನಾಯ್ಕ,ನಾಗೇಂದ್ರ ಆಚಾರ್ಯ, ವಿಠೋಬ ಆಚಾರ್ಯ, ವಿಶ್ವೇಶ ತಂಕಿಲಾಯ, .ಕೃಷ್ಣಾಚಾರ್ಯ ಬಿದರಳ್ಳಿ, . ಗುರುರಾಜ ದೇಶಪಾಂಡೆ ಸೇರಿ ಅನೇಕರಿದ್ದರು.