ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ರೋಟರಿ ಉಡುಪಿ, ಪೆರ್ಡೂರು ಕ್ಲಬ್ ಮತ್ತು ವಲಯ – 4ರ ಎಲ್ಲ ಕ್ಲಬ್‌ಗಳ ಸಹಯೋಗದೊಂದಿಗೆ 10 ನೇ ತರಗತಿ ಮಕ್ಕಳಿಗೆ ಕಲಿಕಾ ಕೌಶಾಲಾಭಿವೃದ್ಧಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
Advertisement
ಮಾರ್ಗದರ್ಶನ ಅಗತ್ಯಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯವಾಗಿರುವುದರಿಂದ ಇಂತಹ ಕಲಿಕಾ ಕೌಶಾಲಾಭಿವೃದ್ಧಿ ಕಾರ್ಯಕ್ರಮಗಳು ಎಲ್ಲ ಕಡೆ ನಡೆದಲ್ಲಿ ವಿದ್ಯಾರ್ಜನೆಗೆ ಸಹಕಾರಿಯಾಗಲಿದೆ ಎಂದು ಆಶೀರ್ವದಿಸಿದರು. ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಶಿಕ್ಷಣ ಸಮನ್ವಯಾಧಿಕಾರಿ ಚಂದ್ರ ನಾಯ್ಕ ಬಾಲಕೃಷ್ಣ ಮ¨ªೋಡಿ, ಬಾಲಕೃಷ್ಣ ಹೆಗ್ಡೆ, ಪ್ರಭಾಕರ್ ಮಲ್ಯ, ಕೆ. ಟಿ . ನಾಯಕ್ ಉಪಸ್ಥಿತರಿದ್ದರು.ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ರಾಜೇಶ್ ಭಟ… ಪಣಿಯಾಡಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರ ನಾಯ್ಕ ವಂದಿಸಿದರು.