Advertisement

ರಾಮಜನ್ಮಭೂಮಿ ಟ್ರಸ್ಟಿಯಾಗಿ ಶ್ರೀ ವಿಶ್ವಪ್ರಸನ್ನತೀರ್ಥರು

01:54 AM Feb 06, 2020 | mahesh |

ಉಡುಪಿ: ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಕೇಂದ್ರ ಸರಕಾರ ರಚಿಸಿದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ನೇಮಿಸಲಾಗಿದೆ. ಪೇಜಾವರ ಮಠಾಧೀಶರಾಗಿದ್ದು ಇತ್ತೀಚೆಗೆ ಪರಂಧಾಮವನ್ನೈದಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಈ ಗೌರವ ನೀಡಲಾಗಿದೆ.

Advertisement

ಒಟ್ಟು 14 ಮಂದಿ ಟ್ರಸ್ಟಿಗಳಿದ್ದು ಎರಡು ಟ್ರಸ್ಟಿಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ, ಎರಡು ಟ್ರಸ್ಟಿಗ ಳನ್ನು ಉಳಿದ ಟ್ರಸ್ಟಿಗಳು ಸರ್ವಾನುಮತದಿಂದ ಆಯ್ಕೆ ಮಾಡ ಬೇಕೆಂದು ನಿಯಮಗಳನ್ನು ರೂಪಿಸಲಾಗಿದೆ. ಪ್ರಯಾಗದ ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮೀಜಿ, ಹರಿದ್ವಾರದ ಯುಗಪುರುಷ ಪರಮಾನಂದಜೀ ಸ್ವಾಮೀಜಿ, ಪುಣೆಯ ಸ್ವಾಮಿ ಶ್ರೀ ಗೋವಿಂದ ದೇವ ಗಿರಿ, ಅಯೋಧ್ಯೆ ನಿರ್ಮೋಹಿ ಅಖಾಡದ ಮಹಂತ ದೇವೇಂದ್ರದಾಸ್‌ ಅವರಲ್ಲದೆ ಗಣ್ಯರು ಟ್ರಸ್ಟಿಗಳಾಗಿದ್ದಾರೆ. ಪ್ರತಿ 3 ತಿಂಗಳಿ ಗೊಮ್ಮೆ ಸಭೆ ಸೇರಿ ಅಗತ್ಯದ ನಿರ್ಣಯಗಳನ್ನು ತಳೆಯ ಬೇಕೆಂದು ತಿಳಿಸಲಾಗಿದೆ. ಟ್ರಸ್ಟ್‌ ಅಧ್ಯಕ್ಷರು, ನಿರ್ವಾಹಕ ವಿಶ್ವಸ್ತರನ್ನಾಗಿ ನಿಯೋಜಿತ ಟ್ರಸ್ಟಿಗಳಲ್ಲಿ ಒಬ್ಬರನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಲಿದ್ದು ಇಬ್ಬರು ಟ್ರಸ್ಟಿಗಳನ್ನು ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ಟ್ರಸ್ಟಿಗಳು ನೇಮಿಸ ಬೇಕು. ದೇಗುಲ ನಿರ್ಮಾಣ, ನಿರ್ವಹಣೆ, ಪಾರ್ಕಿಂಗ್‌ ಸ್ಥಳ, ಭದ್ರತೆ, ಹಣಕಾಸು ವ್ಯವಹಾರವೂ ಸೇರಿದಂತೆ ವಿವಿಧ ಚಟು ವಟಿಕೆಗಳನ್ನು ನಡೆಸುವ ಅಧಿಕಾರ ಟ್ರಸ್ಟ್‌ಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next