ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಆರಾಧ್ಯದೈವ, ಐತಿಹಾಸಿಕ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಜಾತ್ರೆ, ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.
ಸುಲೇಪೇಟ ಗ್ರಾಮದ ಐತಿಹಾಸಿಕ ದೇವಾಲಯ ವೀರಭದ್ರಶ್ವರ ಜಾತ್ರೆ, ರಥೋತ್ಸವ ಕಳೆದ ಎರಡು ವರ್ಷಗಳಿಂದ ನಡೆಯದ ಪ್ರಯುಕ್ತ ಶುಕ್ರವಾರ ನಡೆದ ರಥೋತ್ಸವದಲ್ಲಿ ವಿವಿಧ ಹಳ್ಳಿಗಳಿಂದ ಆಗಮಿಸಿದ ಭಕ್ತರು ರಥದ ಮೇಲೆ ನಾಣ್ಯ, ಉತ್ತುತ್ತಿ, ನಾರು, ಬಾಳೆ ಹಣ್ಣು, ಹೂವು ಎಸೆದು ಕೈಮುಗಿದು ನಮಸ್ಕರಿಸಿ ತಮ್ಮ ಭಕ್ತಿ ಅರ್ಪಿಸಿದರು.
ಜಾತ್ರೆಯ ನಿಮಿತ್ತವಾಗಿ ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ಪ್ರತಿನಿತ್ಯ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ನಡೆಯಿತು. ಪ್ರಭಾವಳಿ ಮತ್ತು ಉಚ್ಚಾಯಿ ಮೆರವಣಿಗೆ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ, ಕುಂಭಾಭಷೇಕ ಭಜನೆ ನಡೆದವು. ರಂಗುರಂಗಿನ ಹೂವುಗಳಿಂದ ಅಲಂಕರಿಸಿದ ರಥವನ್ನು ಸಾವಿರಾರು ಭಕ್ತರು ವೀರಭದ್ರೇಶ್ವರ ಮಹಾರಾಜ ಕೀ ಜಯ ಎಂಬ ಜಯಘೋಷಣೆಯಿಂದ ಸಡಗರ ಸಂಭ್ರಮದಿಂದ ರಥವನ್ನು ಎಳೆದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಹಾರುದ್ರಪ್ಪ ದೇಸಾಯಿ, ಬಸವರಾಜ ಸಜ್ಜನಶೆಟ್ಟಿ, ಶಿವಕುಮಾರ ಕೊತ್ತಪೇಟೆ, ಮೇಘರಾಜ ರಾಠೊಡ, ಆತೀಶ ಪವಾರ, ಮಹೇಶ ಬೆಮಳಗಿ, ಜಾತ್ರೆ ಕಮಿಟಿ ಮುಖಂಡರಾದ ಮಲ್ಲಿಕಾರ್ಜುನ ಹಿರೇನ, ಮಲ್ಲು ದೇಸಾಯಿ, ವಿರೇಶ ದೇಸಾಯಿ, ಶರಣು ಪಡಶೆಟ್ಟಿ, ಗುಲಾಬಚಂದ ಹರದೂರ, ಶಿವಲಿಂಗ ಸಾಲಿಮಠ, ಶಿವಶರಣ ಕುಂಬಾರ, ಮಲ್ಲಿಕಾರ್ಜುನ ಗಿರಿ, ರುದ್ರಮುನಿ , ಕಾಂತಪ್ಪ ಪಡಶೆಟ್ಟಿ ಇನ್ನಿತರರಿದ್ದರು.
ಸುಲೇಪೇಟ ರಥೋತ್ಸವದಲ್ಲಿ ಎಲಕಪಳ್ಳಿ, ಯಾಕಾಪುರ, ಬೆಡಕಪಳ್ಳಿ, ರಾಮತೀರ್ಥ, ಪೆಂಚನಪಳ್ಳಿ, ಕುಪನೂರ, ಕೊರವಿ, ಹೊಡೆಬೀರನಳ್ಳಿ, ದಸ್ತಾಪುರ, ಬಂಟನಳ್ಳಿ, ಕೆರೋಳಿ, ಗರಗಪಳ್ಳಿ, ಪರದಾರ ಮೋತಕಪಳ್ಳಿ ಗ್ರಾಮಸ್ಥರು ಭಾಗವಹಿಸಿ ವೀರಭದ್ರೇಶ್ವರ ದೇವರಿಗೆ ಭಕ್ತಿ ಅರ್ಪಿಸಿದರು.