ಮಾಸ್ತಿ: ಇಲ್ಲಿನ ಸಮೀಪ ವಿಶಾಲವಾದ ಬಂಡೆಯ ಮೇಲೆ ನೆಲೆಸಿರುವ ಶ್ರೀತೀರ್ಥಗಿರೇಶ್ವರಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ಶಿವನ ವಿಗ್ರಹದ ಮುಂದೆಯೇ ಬಂಡೆಯ ಹಳ್ಳದಲ್ಲಿ ಸದಾ ಗಂಗಾ ತೀರ್ಥ ಜಿನುಗುತ್ತಿದ್ದು ಈ ಗ್ರಾಮಕ್ಕೆ ಇದು ತೀರ್ಥಬಂಡಹಟ್ಟಿ ಎಂಬ ಹೆಸರಿಗೆ ಪ್ರಸಿದ್ಧಿ ಪಡೆದಿದೆ.
ಶ್ರೀ ತೀರ್ಥಗಿರೇಶ್ವರಸ್ವಾಮಿ ದೇಗುಲದ ಬಳಿ ನೆಲೆಸಿದ್ದ ಸುಕುಮಂದ ಮಹಾ ಋಷಿಯೊಬ್ಬರು ಶಿವನಿಗೆ ಅಭಿಷೇಕ ಮಾಡಲು ಪ್ರತಿನಿತ್ಯ ಕಾಶಿಯಿಂದ ನೀರು ತಂದು ಅಭಿಷೇಕ ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು ಎಂಬ ಪುರಾಣ ಕಥೆಯಿದೆ.
ಋಷಿಗಳ ಭಕ್ತಿಗೆ ಮೆಚ್ಚಿದ ಶಿವನು ತನ್ನ ಮುಂದೆ ಗಂಗೆ ಉದ್ಬವಿಸುವಂತೆ ಮಾಡಿದನು ಶಿವನ ಗರ್ಭಗುಡಿ ಮುಂದೆ ಇರುವ ಹಳ್ಳದಲ್ಲಿ ಸದಾ ಗಂಗಾ ತೀರ್ಥ ಉದ್ಬವವಾಗುತ್ತದೆ. ಇಲ್ಲಿ ಶಿವನ ವಿಗ್ರಹವು ಪಶ್ವಿಮ ದಿಕ್ಕಿಗೆ ಮುಖ ಮಾಡಿರುವುದು ವಿಶೇಷ. ಪಕ್ಕದಲ್ಲೇ ಪಾರ್ವತಿ ದೇಗುಲವೂ ಇದೆ. ತಮಿಳುನಾಡಿನ ತಂಜಾವೂರಿನ ಬ್ರಹ್ಮದೇಶ್ವರ ಮತ್ತು ಮಾಲೂರಿನ ಮಾಸ್ತಿ ಸಮೀಪದ ತೀರ್ಥಬಂಡಹಟ್ಟಿ ಶಿವನ ದೇವಾಲಯಗಳು 1536ರಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ತಮಿಳುನಾಡಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತೀರ್ಥಬಂಡಹಟ್ಟಿ ಸೂಳಗೀರಿ ಮತ್ತು ಹಂಸಗಿರಿ ಪಾಳೆಗಾರರ ವಶದಲ್ಲಿತ್ತು. 1836ರಲ್ಲಿ ಪಾಳೆ ಪಟ್ಟಿನ ಮಹಾರಾಣಿ ಚನ್ನಮ್ಮ ರಾಣಿ ಆಳ್ವಿಕೆಯ ಅವಧಿ ಯಲ್ಲಿ ನಮ್ಮ ಮುತ್ತಾತರಾದ ಶಿವರಾಮ ಭಟ್ಟರಿಗೆ ಧಾನವಾಗಿ ನೀಡಿರುವುದಾಗಿ ದಾನಪತ್ರದಲ್ಲಿ ತಿಳಿಸಲಾಗಿದೆ ಎಂದು ಅರ್ಚಕರು ಮಾಹಿತಿ ನೀಡಿದರು.
ದೇವರ ಮುಂದೆ ಉದ್ಭವಾಗುವ ತೀರ್ಥದಿಂದ ಹಳ್ಳಯಾವಾಗಲೂ ತುಂಬಿರುತ್ತದೆ. ಬೇಸಿಗೆ ಬರಗಾಲದಲ್ಲೂ ಇಲ್ಲಿನ ನೀರು ಬರಿದಾಗುವುದಿಲ್ಲ. ಬಂಡೆಯ ಹಳ್ಳದಲ್ಲಿ ಉದ್ಬಸವಿಸುವ ಗಂಗಾ ತೀರ್ಥವನ್ನು ಶ್ರದ್ದಾ ಭಕ್ತಿಯಿಂದ 5 ವಾರ ಸೇವಿಸಿದರೆ ಚರ್ಮವ್ಯಾದಿ ಸೇರಿದಂತೆ ಇನ್ನಿತರೆ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಅನಾದಿ ಕಾಲದಲ್ಲಿ ಪ್ರತಿ ಸೋಮವಾರ ಸಂತೆಗೆ ತಮಿಳುನಾಡು ಸೇರಿದಂತೆ 44 ಪಾಳೆಪಟ್ಟಿನ ಗ್ರಾಮಸ್ಥರು ಇಲ್ಲಿಗೆ ಆಗಮಿಸಿ ವ್ಯಾಪಾರ ವಹಿ ವಾಟುಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಕಲ್ಲಿನ ಮಂಟಪಗಳು ಸಾಕ್ಷಿಯಾಗಿವೆ.
ಸಮಯದಲ್ಲಿ ಇಲ್ಲಿ ಉದ್ಬವಿಸುವ ನೀರನ್ನು ಜನತೆ ಸೇವಿಸಿ ತಮ್ಮ ದಾಹ ವನ್ನು ತೀರಿಸಿಕೊಳ್ಳುತ್ತಿದ್ದರು. ಹಾಗೂ ಇಲ್ಲಿ ಪ್ರತಿವರ್ಷ ಶ್ರೀ ತೀರ್ಥಗಿರೇಶ್ವರ ಸ್ವಾಮಿ ರಥೋತ್ಸವವೂ ಸಹ ನಡೆಯುತ್ತಿತ್ತು. ಆದರೆ ಸಂತೆ ಹಾಗೂ ಬ್ರಹ್ಮ ರಥೋ ತ್ಸವವು ಹಲವಾರು ವರ್ಷಗಳಿಂದ ಸ್ಥಗಿತ ಗೊಂಡಿದೆ. ಆದರೂ ಪ್ರತಿ ಸೋಮವಾರ ವಿಶೇ ಷ ಅಭಿಷೇಕ, ಪೂಜಾ ಕೈಂಕಯ್ಯì ನಡೆಯು ತ್ತವೆ. ಕಾರ್ತೀಕ ಮಾಸ, ಶಿವರಾತ್ರಿ ವಿಶೇಷ ಪೂಜೆ ಇರುತ್ತದೆ.
ಈ ಬಾರಿಯ ಮಹಾಶಿವಾರಾತ್ರಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ತಾಲೂಕು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಉದ್ಭವ ಗಂಗಾತೀರ್ಥವನ್ನು ಸೇವಿಸಿ ಪುನಿತರಾದರು. ರಾತ್ರಿ ವಿಶೇಷ ಜಾಗರಣೆ ಅಂಗವಾಗಿ ಭಜನೆ, ಪೂಜೆ ನಡೆಯಿತು.